ADVERTISEMENT

ದೀಪಾವಳಿ ಹಬ್ಬದ ಪ್ರಯುಕ್ತ ಷೇರುಪೇಟೆಯಲ್ಲಿ ಸೋಮವಾರ ಸಂಜೆ ಮುಹೂರ್ತ ವಹಿವಾಟು

ಪಿಟಿಐ
Published 21 ಅಕ್ಟೋಬರ್ 2022, 10:30 IST
Last Updated 21 ಅಕ್ಟೋಬರ್ 2022, 10:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಮುಂಬೈ ಷೇರುಪೇಟೆ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೋಮವಾರ ಸಂಜೆ 6.15ರಿಂದ 7.15ರವರೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಮುಹೂರ್ತ ವಹಿವಾಟು ನಡೆಸಲಿವೆ.

ಶುಭಪ್ರದವಾಗಿರುವ ಮುಹೂರ್ತ ವಹಿವಾಟಿನಲ್ಲಿ ತೊಡಗುವುದರಿಂದ ಸಮೃದ್ಧಿ ಮತ್ತು ಹಣಕಾಸಿನ ಬೆಳವಣಿಗೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ.

‘ಹೊಸ ಆರಂಭಕ್ಕೆ ದೀಪಾವಳಿಯು ಶುಭ ಸಂದರ್ಭ ಎಂಬ ನಂಬಿಕೆ ಇದೆ. ಈಗಿನ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಾತಾವರಣ ಇದೆ. ಮುಹೂರ್ತ ವಹಿವಾಟಿನಲ್ಲಿ ಭಾಗಿಯಾಗುವುದರಿಂದ ಹೂಡಿಕೆದಾರರಿಗೆ ವರ್ಷವಿಡೀ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಅಪ್‌ಸ್ಟಾಕ್ಸ್‌ ನಿರ್ದೇಶಕ ಪುನೀತ್ ಮಹೇಶ್ವರಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.