ನವದೆಹಲಿ (ಪಿಟಿಐ): ಚಿನ್ನದ ವಿನಿಮಯ ವಹಿವಾಟು ನಿಧಿಗಳಿಂದ (ಇಟಿಎಫ್) ಬಂಡವಾಳ ಹೊರಹರಿವು ಹೆಚ್ಚುತ್ತಲೇ ಇದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್–ಜೂನ್ ಅವಧಿ) ₹ 150 ಕೋಟಿ ಬಂಡವಾಳ ಹೊರಹೋಗಿದೆ. ಇದರಿಂದ ಉದ್ಯಮದ ನಿರ್ವಹಣೆಯಲ್ಲಿ ಇರುವ ಸಂಪತ್ತು ಮೌಲ್ಯ ಶೇ 12 ರಷ್ಟು ಇಳಿಕೆಯಾಗಿದ್ದು, ₹ 4,567 ಕೋಟಿಗೆ ತಲುಪಿದೆ. 2017–18ರ ಮೊದಲ ತ್ರೈಮಾಸಿಕದಲ್ಲಿ ಸಂಪತ್ತು ಮೌಲ್ಯ ₹ 5,174 ಕೋಟಿ ಇತ್ತು.
ಇದೇ ಅವಧಿಯಲ್ಲಿ ಷೇರುಗಳ ಖರೀದಿಗೆ ₹ 33 ಸಾವಿರ ಕೋಟಿ ಹೂಡಿಕೆಯಾಗಿದೆ.
‘2014 ರಿಂದ ಷೇರುಪೇಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ಹೀಗಾಗಿ ಹೂಡಿಕೆದಾರರು ಷೇರುಗಳಲ್ಲಿ ಬಂಡವಾಳ ತೊಡಗಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಮಾರ್ನಿಂಗ್ಸ್ಟಾರ್ ಸಂಸ್ಥೆಯ ಭಾರತದ ವ್ಯವಸ್ಥಾಪಕ ನಿರ್ದೇಶಕಕೌಸ್ತುಭಾ ಬೇಲಾಪುರ್ಕರ್ ಹೇಳಿದ್ದಾರೆ.
2016ರ ಅಕ್ಟೋಬರ್ನಲ್ಲಿ ₹ 20 ಕೋಟಿ ಹೂಡಿಕೆ ಆಗಿತ್ತು.
ಅಂಕಿ–ಅಂಶ
ಬಂಡವಾಳ ಹೊರಹರಿವು (ಕೋಟಿಗಳಲ್ಲಿ)
2017–18;₹835
2016–17;₹ 775
2015–16;₹ 903
2014–15;₹ 1,475
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.