ADVERTISEMENT

ಹೂಡಿಕೆದಾರರ ₹ 8.23 ಲಕ್ಷ ಕೋಟಿ ಸಂಪತ್ತು ನಷ್ಟ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 12:23 IST
Last Updated 30 ಜನವರಿ 2021, 12:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದ ಷೇರುಪೇಟೆಗಳಲ್ಲಿ ಈ ವಾರ ಕರಡಿ ಕುಣಿತ ಜೋರಾಗಿತ್ತು. ವಾರದ ವಹಿವಾಟು ನಕಾರಾತ್ಮಕವಾಗಿ ಅಂತ್ಯಗೊಂಡಿದೆ.

ಗಣರಾಜ್ಯೋತ್ಸವದ ಪ್ರಯುಕ್ತ ಮಂಗಳವಾರ ವಹಿವಾಟಿಗೆ ರಜೆ ಇತ್ತು. ನಾಲ್ಕು ದಿನಗಳ ವಾರದ ವಹಿವಾಟಿನಲ್ಲಿಯೂ ಮಾರಾಟದ ಒತ್ತಡಕ್ಕೆ ಒಳಗಾಗಿ ಸೂಚ್ಯಂಕಗಳು ಇಳಿಕೆ ಕಂಡವು

ಮುಂಬೈ ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು ₹ 8.23 ಲಕ್ಷ ಕೋಟಿಗಳಷ್ಟು ಕರಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 194.35 ಲಕ್ಷ ಕೋಟಿಗಳಿಂದ ₹ 186.12 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ವಾರದ ವಹಿವಾಟಿನಲ್ಲಿ ಒಟ್ಟಾರೆ 3,506 ಅಂಶಗಳಷ್ಟು ಇಳಿಕೆಯಾಗಿ 46,285 ಅಂಶಗಳಿಗೆ ತಲುಪಿದೆ.

ಲಾಭ ಗಳಿಸಿಕೊಳ್ಳುವ ಉದ್ದೇಶದಿಂದ ಹೂಡಿಕೆದಾರರು ವಹಿವಾಟು ನಡೆಸುತ್ತಿರುವುದರಿಂದ ಷೇರುಪೇಟೆಗಳ ಸೂಚ್ಯಂಕಗಳು ಇಳಿಕೆ ಕಾಣುತ್ತಿವೆ ಎಂದು ತಜ್ಞರು ಹೇಳಿದ್ದಾರೆ.

ವಿದೇಶಿ ಬಂಡವಾಳ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಗಮನ ನೀಡುತ್ತಿದ್ದಾರೆ . ಮಾರುಕಟ್ಟೆಯ ಮಾಹಿತಿಯ ಪ್ರಕಾರ, ಸೋಮವಾರದ ವಹಿವಾಟಿನಲ್ಲಿ ₹ 765 ಕೋಟಿ, ಬುಧವಾರ ₹ 1,688 ಕೋಟಿ ಹಾಗೂ ಗುರುವಾರ ₹ 3,712 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಪ್ರಮುಖ ಕಂಪನಿಗಳ ಮಾರುಕಟ್ಟೆ ಮೌಲ್ಯ (ಕೋಟಿಗಳಲ್ಲಿ)

ರಿಲಯನ್ಸ್‌ ಇಂಡಸ್ಟ್ರೀಸ್‌;₹ 11,68,454

ಟಾಟಾ ಕನ್ಸಲ್ಟನ್ಸಿ ಸರ್ವೀಸಸ್; ₹ 11,68,079

ಹಿಂದುಸ್ತಾನ್‌ ಯುನಿಲಿವ್‌; ₹ 5,31,798

ಇನ್ಫೊಸಿಸ್‌;₹ 5,28,040

ಎಚ್‌ಡಿಎಫ್‌ಸಿ; ₹ 4,28,040

ಐಸಿಐಸಿಐ ಬ್ಯಾಂಕ್‌; ₹ 3,70,773

ಕೋಟಕ್‌ ಮಹೀಂದ್ರಾ ಬ್ಯಾಂಕ್‌; ₹ 3,39,345

ಭಾರ್ತಿ ಏರ್‌ಟೆಲ್‌; ₹ 3,01,801

ಬಜಾಜ್‌ ಫೈನಾನ್ಸ್‌; ₹ 2,85,382

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.