ಕರಾಚಿ: ಸತತ ಎರಡನೇ ದಿನವಾದ ಗುರುವಾರವೂ ಪಾಕಿಸ್ತಾನದ ಪ್ರಮುಖ ಷೇರುಪೇಟೆಯಾದ ಕರಾಚಿ ಸ್ಟಾಕ್ ಎಕ್ಸ್‌ಚೇಂಚ್–100 ಸೂಚ್ಯಂಕ ಮಹಾಪತನ ಕಂಡಿದೆ.
6,948 ಅಂಶ ಕುಸಿತ (ಶೇ 6.32ರಷ್ಟು) ಕಂಡಿದ್ದು, 1,03,060 ಅಂಶಗಳಲ್ಲಿ ಸ್ಥಿರಗೊಂಡಿತು.
ಕರಾಚಿಯನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯು ದಾಳಿ ನಡೆಸಬಹುದು ಎಂಬ ಭೀತಿ ಸೃಷ್ಟಿಯಾಗಿದೆ. ಈ ಬೆಳವಣಿಗೆಯು ಹೂಡಿಕೆದಾರರಲ್ಲಿ ತಳಮಳ ಸೃಷ್ಟಿಸಿದ್ದು, ಷೇರುಪೇಟೆಯ ಕುಸಿತಕ್ಕೆ ಕಾರಣವಾಗಿದೆ ಎಂದು ಅಲ್ಲಿನ ಹೂಡಿಕೆ ಸಲಹಾ ಸಂಸ್ಥೆಯಾದ ಎಕೆಡಿ ಸೆಕ್ಯುರಿಟೀಸ್‌ನ ಫಾತಿಮಾ ಬುಚಾ ತಿಳಿಸಿದ್ದಾರೆ.
ಸಿಮೆಂಟ್, ಎನರ್ಜಿ, ಬ್ಯಾಂಕಿಂಗ್, ಟೆಕ್ನಾಲಜಿ ಷೇರುಗಳ ಮಾರಾಟ ಹೆಚ್ಚಳವು ಷೇರುಪೇಟೆ ಕುಸಿತಕ್ಕೆ ಕಾರವಾಗಿದೆ.
ಈ ನಡುವೆಯೇ ಪಾಕಿಸ್ತಾನ ಸರ್ಕಾರವು, ವಿದೇಶಿ ವಿನಿಮಯ ಮೀಸಲು ಸ್ಥಿರತೆ ಕಾಪಾಡಲು ಹಲವು ಕ್ರಮಕ್ಕೆ ಮುಂದಾಗಿದೆ. ಇದರ ಭಾಗವಾಗಿ ಆಭರಣ ಮತ್ತು ಹರಳುಗಳ ರಫ್ತು, ಆಮದಿಗೆ 60 ದಿನಗಳವರೆಗೆ ನಿರ್ಬಂಧ ಹೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.