ADVERTISEMENT

ಉಕ್ರೇನ್ ಬಿಕ್ಕಟ್ಟು: ಸಾವಿರ ಅಂಶ ಕುಸಿದ ಸೆನ್ಸೆಕ್ಸ್, 16,950 ಅಂಶಗಳಲ್ಲಿ ನಿಫ್ಟಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 5:02 IST
Last Updated 22 ಫೆಬ್ರುವರಿ 2022, 5:02 IST
   

ಮುಂಬೈ: ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶೀಯ ಷೇರು ಪೇಟೆಗಳಲ್ಲಿ ಕುಸಿತ ಕಂಡುಬಂದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪೂರ್ವ ಉಕ್ರೇನ್‌ನ ಎರಡು ಪ್ರದೇಶಗಳನ್ನು ಸ್ವತಂತ್ರವೆಂದು ಘೋಷಿಸಲು ಮುಂದಾಗಿರುವುದು ಹೂಡಿಕೆದಾರರ ಕಳವಳಕ್ಕೆ ಕಾರಣವಾಗಿದೆ.

ಷೇರುಪೇಟೆ ವಹಿವಾಟು ಆರಂಭವಾಗುತ್ತಿದ್ದಂತೆ ಬೆಳಗ್ಗೆ 9.19ರ ವೇಳೆಗೆ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,004 ಅಂಶ(ಶೇಕಡ 1.74) ಇಳಿಕೆ ದಾಖಲಿಸಿ 56,680 ಅಂಶಗಳಲ್ಲಿ ವಹಿವಾಟು ನಡೆಸಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ 285 ಅಂಶ(ಶೇಕಡ 1.66)ಗಳಷ್ಟು ಕುಸಿತ ಕಂಡು 16,922 ಅಂಶಗಳಲ್ಲಿ ವಹಿವಾಟು ನಡೆಸಿತು.

ಜಪಾನ್‌ನ ಷೇರು ಪೇಟೆ ನಿಕ್ಕಿ ಶೇಕಡ 2.34, ದಕ್ಷಿಣ ಕೊರಿಯಾದ ಕಾಸ್ಪಿ ಶೇಕಡ 1.72 ಮತ್ತು ಶಾಂಘೈ ಕಾಂಪೋಸಿಟ್ ಸೂಚ್ಯಂಕ ಶೇಕಡ 1.36 ರಷ್ಟು ಕುಸಿದಿದ್ದರಿಂದ ಏಷ್ಯಾದ ಷೇರು ಮಾರುಕಟ್ಟೆಗಳು ಕೂಡ ಕುಸಿತ ದಾಖಲಿಸಿವೆ.

ADVERTISEMENT

ನಿಫ್ಟಿ ಮಿಡ್‌ಕ್ಯಾಪ್ ಸೂಚ್ಯಂಕವು 100 ಅಂಶಗಳಷ್ಟು ( ಶೇಕಡಾ 1.56 ) ಕುಸಿತ ದಾಖಲಿಸಿದೆ.

ಟಿಸಿಎಸ್ ಅತ್ಯಂತ ಅಧಿಕ ಕುಸಿತ ಕಂಡಿದ್ದು, ಶೇಕಡ 2.94ರಷ್ಟು ಕುಸಿದು ₹ 3,610.00 ಕ್ಕೆ ತಲುಪಿದೆ. ಎಲ್ ಅಂಡ್ ಟಿ, ಡಾ. ರೆಡ್ಡೀಸ್, ಯುಪಿಎಲ್ ಮತ್ತು ಬಜಾಜ್ ಫಿನ್‌ಸರ್ವ್‌ಗಳು ಸಹ ಕುಸಿತ ದಾಖಲಿಸಿವೆ. ಒಎನ್‌ಜಿಸಿ ಮಾತ್ರ ಏರಿಕೆ ದಾಖಲಿಸಿದೆ.

ಮುಂಬೈ ಷೇರುಪೇಟೆಯಲ್ಲಿ 311 ಷೇರುಗಳು ಏರಿಕೆ ದಾಖಲಿಸಿದ್ದು, 2,295 ಷೇರುಗಳು ಕುಸಿತ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.