ಮುಂಬೈ: ವಿದೇಶಿ ನಿಧಿಯ ಒಳಹರಿವು ಮತ್ತು ಅಮೆರಿಕ ಮಾರುಕಟ್ಟೆಗಳ ತೀವ್ರ ಏರಿಕೆಯ ನಡುವೆ ಹೂಡಿಕೆದಾರರ ಭಾವನೆ ಸ್ಥಿರವಾಗಿರುವುದರಿಂದ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ದಾಖಲಿಸಿವೆ.
ಬಿಎಸ್‌ಇಯ 30 ಷೇರುಗಳ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 418 ಅಂಶಗಳಷ್ಟು ಏರಿಕೆ ಕಂಡು 78,402ರಲ್ಲಿ ವಹಿವಾಟು ಆರಂಭಿಸಿತ್ತು. ಎನ್‌ಎಸ್‌ಇ ನಿಫ್ಟಿ 107 ಅಂಶಗಳಷ್ಟು ಏರಿಕೆ ಕಂಡು 23,766ರಲ್ಲಿ ವಹಿವಾಟು ಆರಂಭಿಸಿದೆ.
ಸೆನ್ಸೆಕ್ಸ್ ಗುಚ್ಛದ ಅಲ್ಟ್ರಾಟೆಕ್ ಸಿಮೆಂಟ್, ಇನ್ಫೊಸಿಸ್, ಎಚ್‌ಸಿಎಲ್ ಟೆಕ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಪವರ್ ಗ್ರಿಡ್, ಬಜಾಜ್ ಫಿನ್‌ಸರ್ವ್, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಮಾರುತಿ ಅತಿ ಹೆಚ್ಚು ಲಾಭ ಗಳಿಸಿವೆ.
ಇಂಡಸ್‌ಇಂಡ್ ಬ್ಯಾಂಕ್, ಜೊಮಾಟೊ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಸ್ಟೀಲ್ ನಷ್ಟ ಅನುಭವಿಸಿವೆ.
ವಿನಿಮಯ ದತ್ತಾಂಶದ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ ₹3,055 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಏಷ್ಯಾದ ಮಾರುಕಟ್ಟೆಗಳಲ್ಲಿ, ಟೋಕಿಯೊ ಏರಿಕೆ ಕಂಡರೆ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ಕಂಡಿವೆ.
ಸೋಮವಾರ ಅಮೆರಿಕ ಮಾರುಕಟ್ಟೆಗಳು ಗಣನೀಯವಾಗಿ ಏರಿಕೆಯಾಗಿ ಕೊನೆಗೊಂಡವು.
ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ಶೇ. 0.03ರಷ್ಟು ಏರಿಕೆಯಾಗಿ 73.02 ಡಾಲರ್‌ಗೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.