ADVERTISEMENT

ಷೇರುಪೇಟೆ: ಎಫ್‌ಐಐ ಒಳಹರಿವು; ಆರಂಭಿಕ ವಹಿವಾಟಿನಲ್ಲಿ ಜಿಗಿದ ಸೆನ್ಸೆಕ್ಸ್, ನಿಫ್ಟಿ

ಪಿಟಿಐ
Published 24 ಮಾರ್ಚ್ 2025, 5:31 IST
Last Updated 24 ಮಾರ್ಚ್ 2025, 5:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ಹೊಸದಾಗಿ ವಿದೇಶಿ ಬಂಡವಾಳದ ಒಳಹರಿವು ಮತ್ತು ಬ್ಲೂ ಚಿಪ್ ಷೇರುಗಳ ಖರೀದಿಯಿಂದಾಗಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡವು.

ಅಮೆರಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಪ್ರವೃತ್ತಿಯು ದೇಶೀಯ ಷೇರುಗಳ ಏರಿಕೆಗೆ ಕಾರಣವಾಯಿತು.

ADVERTISEMENT

ಬಿಎಸ್‌ಇಯ 30-ಷೇರುಗಳ ಸೂಚ್ಯಂಕ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 592 ಅಂಶಗಳಷ್ಟು ಜಿಗಿತ ಕಂಡು 77,498ರಲ್ಲಿ ವಹಿವಾಟು ಆರಂಭಿಸಿತು. ಎನ್‌ಎಸ್‌ಇ ನಿಫ್ಟಿ 169 ಅಂಶಗಳಷ್ಟು ಏರಿಕೆ ಕಂಡು 23,519ರಲ್ಲಿ ವಹಿವಾಟು ಆರಂಭಿಸಿತು.

ಸೆನ್ಸೆಕ್ಸ್ ಗುಚ್ಛದ ಪವರ್ ಗ್ರಿಡ್, ಕೋಟಕ್ ಮಹೀಂದ್ರ ಬ್ಯಾಂಕ್, ಲಾರ್ಸೆನ್ ಅಂಡ್ ಟೂಬ್ರೊ, ಆಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ, ಬಜಾಜ್ ಫಿನ್‌ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಅತಿ ಹೆಚ್ಚು ಲಾಭ ಗಳಿಸಿದವು.

ಟೈಟನ್, ಮಹೀಂದ್ರ ಅಂಡ್ ಮಹೀಂದ್ರ, ಇನ್ಫೊಸಿಸ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ನಷ್ಟ ಕಂಡಿವೆ.

ವಿದೇಶಿ ವಿನಿಮಯ ಕೇಂದ್ರದ ದತ್ತಾಂಶದ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್‌ಐಐ) ಶುಕ್ರವಾರ ₹7,470.36 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಇಳಿಕೆ ಕಂಡಿವೆ.

ಶುಕ್ರವಾರ ಅಮೆರಿಕದ ಮಾರುಕಟ್ಟೆಗಳು ಸಕಾರಾತ್ಮಕವಾಗಿ ಕೊನೆಗೊಂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.