ಮುಂಬೈ: ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ ದಿಢೀರ್ ಕುಸಿತಕ್ಕೆ ಒಳಗಾಯಿತು. ಮಧ್ಯಾಹ್ನ 2:45ರ ವೇಳೆಗೆ 816 ಅಂಶಗಳಷ್ಟು ಇಳಿಕೆಯಾಗಿ 59,261 ಅಂಶಗಳಲ್ಲಿ ವಹಿವಾಟು ನಡೆಯಿತು. 3ರ ಹೊತ್ತಿಗೆ ಮತ್ತೆ ಚೇತರಿಸಿಕೊಂಡು59,630 ಅಂಶಗಳನ್ನು ತಲುಪಿತು.
ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 200.95 ಅಂಶ ಕಡಿಮೆಯಾಗಿ 17,654 ಅಂಶಗಳಿಗೆ ಇಳಿಯಿತು. ಈಗ17,740 ಅಂಶಗಳಲ್ಲಿ ವಹಿವಾಟು ನಡೆದಿದೆ. ತಂತ್ರಜ್ಞಾನ ಮತ್ತು ಖಾಸಗಿ ಬ್ಯಾಂಕ್ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾಗಿ ಷೇರುಪೇಟೆಯಲ್ಲಿ ತಲ್ಲಣ ಸೃಷ್ಟಿಸಿದೆ.
ಭಾರ್ತಿ ಏರ್‌ಟೆಲ್ ಷೇರು ಬೆಲೆ ಶೇ 4ರಷ್ಟು ಕಡಿಮೆಯಾದರೆ, ಟೆಕ್ ಮಹೀಂದ್ರಾ ಷೇರು ಶೇ 3.6ರಷ್ಟು ಇಳಿಕೆಯಾಗಿದೆ. ಬ್ಯಾಂಕ್ ಷೇರುಗಳು ಶೇ 1.5ರಷ್ಟು ಕಡಿಮೆಯಾದರೆ, ಐಟಿ ಷೇರುಗಳು ಶೇ 2ಕ್ಕೆ ಅಧಿಕ ಕುಸಿದ ದಾಖಲಿಸಿವೆ. ಸತತ ಐದು ವಹಿವಾಟುಗಳಲ್ಲಿ ಏರುಗತಿಯಲ್ಲಿದ್ದ ರಿಯಲ್ ಎಸ್ಟೇಟ್ ಷೇರುಗಳು ಇಂದು ಸುಮಾರು ಶೇ 5ರವರೆಗೂ ಕುಸಿದಿವೆ.
ಈ ನಡುವೆ ಲೋಹ ಮತ್ತು ಇಂಧನ ವಲಯದ ಷೇರುಗಳ ಬೆಲೆ ಶೇ 2ರಷ್ಟು ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.