ADVERTISEMENT

ಸಂವೇದಿ ಸೂಚ್ಯಂಕ 311 ಅಂಶ ಇಳಿಕೆ

ಪಿಟಿಐ
Published 18 ಫೆಬ್ರುವರಿ 2019, 20:19 IST
Last Updated 18 ಫೆಬ್ರುವರಿ 2019, 20:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಸತತ ಎಂಟನೇ ವಹಿವಾಟು ಅವಧಿಯಲ್ಲಿಯೂ ಷೇರುಪೇಟೆಯಲ್ಲಿ ನಕಾರಾತ್ಮಕ ಚಟುವಟಿಕೆ ನಡೆಯಿತು.

ವಿದೇಶಿ ಬಂಡವಾಳ ಹೊರಹರಿವಿನ ಪರಿಣಾಮದಿಂದಬ್ಯಾಂಕಿಂಗ್‌, ಎಫ್‌ಎಂಸಿಜಿ, ಐಟಿ, ವಾಹನ ಮತ್ತು ಔಷಧ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 311 ಅಂಶ ಇಳಿಕೆ ಕಂಡು, 35,498 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 83 ಅಂಶ ಇಳಿಕೆಯಾಗಿ 10,640 ಅಂಶಗಳಿಗೆ ತಲುಪಿತು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 11 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 71.34ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.