ADVERTISEMENT

ಸೂಚ್ಯಂಕ 453 ಅಂಶ ಜಿಗಿತ

ಪಿಟಿಐ
Published 29 ನವೆಂಬರ್ 2018, 20:00 IST
Last Updated 29 ನವೆಂಬರ್ 2018, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ರೂಪಾಯಿ ಚೇತರಿಕೆ ಹಾಗೂ ನವೆಂಬರ್ ತಿಂಗಳ ವಾಯಿದಾ ವಹಿವಾಟು ಮುಕ್ತಾಯವು ಷೇರುಪೇಟೆಯಲ್ಲಿ ಉತ್ತಮ ಖರೀದಿ ಚಟುವಟಿಕೆ ನಡೆಯುವಂತೆ ಮಾಡಿತು.

ಸರ್ಕಾರಿ ಬಾಂಡ್‌ಗಳ ನವೆಂಬರ್‌ ತಿಂಗಳ ವಾಯಿದಾ ವಹಿವಾಟು ಗುರುವಾರ ಅಂತ್ಯವಾಗಿದೆ. ಹೀಗಾಗಿ ಖರೀದಿ ಪ್ರಕ್ರಿಯೆ ಉತ್ತಮವಾಗಿತ್ತು.

ಅಮೆರಿಕದ ಫೆಡರಲ್‌ ರಿಸರ್ವ್‌. ಸದ್ಯದ ಮಟ್ಟಿಗೆ ಬಡ್ಡಿದರದಲ್ಲಿ ಏರಿಕೆ ಮಾಡದೇ ಇರಲು ನಿರ್ಧರಿಸಿದೆ. ಈ ನಿರ್ಧಾರವು ಹೂಡಿಕೆಯನ್ನು ಹೆಚ್ಚಾಗುವಂತೆ ಮಾಡಿದೆ.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 453 ಅಂಶ ಜಿಗಿತ ಕಂಡು 36,170ರಲ್ಲಿ ವಹಿವಾಟು ಅಂತ್ಯವಾಯಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 130 ಅಂಶ ಹೆಚ್ಚಾಗಿ 10,858 ಅಂಶಗಳಿಗೆ ತಲುಪಿತು.

ಸೆಬಿ ಎಚ್ಚರಿಕೆ: ನೋಂದಾಯಿಸಿಕೊಳ್ಳದ ಹೂಡಿಕೆ ಸಲಹೆಗಾರರ ಮಾತನ್ನು ಕೇಳದೇ ಇರುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸಾರ್ವಜನಿಕರಿಗೆ ಸೂಚನೆ ನೀಡಿದೆ.

ಹೂಡಿಕೆ ಸಲಹೆಗಳನ್ನು ನೀಡುವವರಿಗೆ ಬ್ಯಾಂಕ್‌ಗಳ ಮೂಲಕವೇ ಸಲಹಾ ಶುಲ್ಕ ಪಾವತಿಸುವಂತೆಯೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.