ADVERTISEMENT

ಲಾಭ ಗಳಿಕೆ ವಹಿವಾಟಿಗೆ ಸೆನ್ಸೆಕ್ಸ್, ನಿಫ್ಟಿ ಇಳಿಕೆ

ಪಿಟಿಐ
Published 20 ಅಕ್ಟೋಬರ್ 2021, 11:48 IST
Last Updated 20 ಅಕ್ಟೋಬರ್ 2021, 11:48 IST
   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರದ ವಹಿವಾಟಿನಲ್ಲಿ 456 ಅಂಶ ಇಳಿಕೆ ಕಂಡಿತು. ವರ್ತಕರು ಲಾಭ ಗಳಿಕೆಯ ಉದ್ದೇಶದಿಂದ ಷೇರುಗಳ ಮಾರಾಟಕ್ಕೆ ಹೆಚ್ಚಿನ ಗಮನ ನೀಡಿದ ಕಾರಣದಿಂದಾಗಿ ಸೂಚ್ಯಂಕ ಕುಸಿತದ ಹಾದಿ ಹಿಡಿಯಿತು.

ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 61,259 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ, 152 ಅಂಶ ಇಳಿಕೆ ಕಂಡು 18,266 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.

ಸೆನ್ಸೆಕ್ಸ್‌ನಲ್ಲಿನ ಬಹುತೇಕ ಕಂಪನಿಗಳ ಷೇರುಮೌಲ್ಯ ಇಳಿಕೆ ಕಂಡಿತು. ಹೀಗಿದ್ದರೂ, ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್‌ಗಳ ಷೇರುಮೌಲ್ಯವು ಹೆಚ್ಚಾಯಿತು. ಹೂಡಿಕೆದಾರರು ಆಯ್ದ ಕೆಲವು ಬ್ಯಾಂಕ್‌ಗಳ ಷೇರು ಖರೀದಿಯಲ್ಲಿ ತೊಡಗಿದ್ದರು ಎಂದು ಎ‌ಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಎಸ್. ರಂಗನಾಥನ್ ತಿಳಿಸಿದರು.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ಶೇಕಡ 0.82ರಷ್ಟು ಇಳಿಕೆಯಾಗಿದೆ. ಬೆಲೆಯು ಪ್ರತಿ ಬ್ಯಾರೆಲ್‌ಗೆ 84.38 ಅಮೆರಿಕನ್ ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.