ADVERTISEMENT

ಸೂಚ್ಯಂಕ 572 ಅಂಶ ಕುಸಿತ

ಜಾಗತಿಕ ಮಾರುಕಟ್ಟೆಗಳ ನಕಾರಾತ್ಮಕ ಪರಿಣಾಮ

ಪಿಟಿಐ
Published 6 ಡಿಸೆಂಬರ್ 2018, 17:07 IST
Last Updated 6 ಡಿಸೆಂಬರ್ 2018, 17:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಸತತ ಮೂರನೇ ವಹಿವಾಟು ಅವಧಿಯಲ್ಲಿಯೂ ಷೇರುಪೇಟೆಗಳು ಇಳಿಕೆ ಕಂಡಿದ್ದು, ಗುರುವಾರ ಅತಿ ಹೆಚ್ಚಿನ ನಷ್ಟ ಅನುಭವಿಸಿವೆ.

ಜಾಗತಿಕ ಷೇರುಪೇಟೆಗಳಲ್ಲಿನ ಇಳಿಮುಖ ವಹಿವಾಟು, ರೂಪಾಯಿ ಮೌಲ್ಯ ಕುಸಿತ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಮಾರಾಟದ ಒತ್ತಡಕ್ಕೆ ಒಳಗಾಗಿ ದೇಶದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 572 ಅಂಶ (ಶೇ 1.59) ಕುಸಿತ ಕಂಡು, 35,312 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 181 ಅಂಶ ಇಳಿಕೆ ಕಂಡು 10,601 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಲೋಹ, ಔಷಧ, ತೈಲ, ಅನಿಲ ಮತ್ತು ಹಣಕಾಸು ವಲಯದ ಷೇರುಗಳು ಹೆಚ್ಚಿನ ಇಳಿಕೆ ಕಂಡಿವೆ.

ಅಮೆರಿಕ ಮತ್ತು ಚೀನಾದ ವಾಣಿಜ್ಯ ಬಿಕ್ಕಟ್ಟಿಗೆ ಹೊಸ ವಿವಾದ ತಳುಕು ಹಾಕಿಕೊಂಡಿರುವುದು ಹೂಡಿಕೆ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.