ADVERTISEMENT

ಸೂಚ್ಯಂಕ 222 ಅಂಶ ಏರಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 20:00 IST
Last Updated 16 ಏಪ್ರಿಲ್ 2020, 20:00 IST
   

ಮುಂಬೈ: ದೇಶದ ಷೇರುಪೇಟೆಗಳು ಗುರುವಾರದ ವಹಿವಾಟಿನಲ್ಲಿ ತುಸು ಚೇತರಿಕೆ ಹಾದಿಗೆ ಮರಳಿದವು.

ಜಾಗತಿಕ ಷೇರುಪೇಟೆಗಳು ನಕಾರಾತ್ಮಕವಾಗಿದ್ದರೂಹಣಕಾಸು, ಇಂಧನ ಮತ್ತು ವಿದ್ಯುತ್ ವಲಯದ ಷೇರುಗಳು ಉತ್ತಮ ಗಳಿಕೆಯಿಂದಾಗಿ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 223 ಅಂಶ ಹೆಚ್ಚಾಗಿ 30,603 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್ಇ) ಸೂಚ್ಯಂಕ ನಿಫ್ಟಿ 67 ಅಂಶ ಹೆಚ್ಚಾಗಿ 8,993 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ದಿನದ ವಹಿವಾಟಿನಲ್ಲಿ ಎನ್‌ಟಿಪಿಸಿ ಷೇರು ಶೇ 6ರವರೆಗೂ ಜಿಗಿತ ಕಂಡಿತು. ಐಸಿಐಸಿಐ ಬ್ಯಾಂಕ್‌, ಟೈಟಾನ್‌, ಎಲ್‌ಆ್ಯಂಡ್‌ಟಿ, ಎಸ್‌ಬಿಐ, ಸನ್‌ ಫಾರ್ಮಾ ಮತ್ತು ನೆಸ್ಲೆ ಇಂಡಿಯಾ ಷೇರುಗಳೂ ಗಳಿಕೆ ಕಂಡುಕೊಂಡಿವೆ.

ಕಂಪನಿಗಳ ತ್ರೈಮಾಸಿಕ ಫಲಿತಾಂಶ ಬಿಡುಗಡೆ ಆರಂಭವಾಗಿದ್ದು, ಷೇರುಪೇಟೆಯ ಮೇಲೆ ಪ್ರಭಾವ ಬೀರಲಾರಂಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.