ADVERTISEMENT

ಷೇರುಪೇಟೆ: ಅನಿಶ್ಚಿತತೆ, ಕುಸಿದ ಸೂಚ್ಯಂಕಗಳು

​ಪ್ರಜಾವಾಣಿ ವಾರ್ತೆ
Published 21 ಮೇ 2023, 22:53 IST
Last Updated 21 ಮೇ 2023, 22:53 IST
ಪೇಟೆಯಲ್ಲಿ ಅನಿಶ್ಚಿತತೆ: ಕುಸಿದ ಸಂವೇದಿ ಸೂಚ್ಯಂಕ
ಪೇಟೆಯಲ್ಲಿ ಅನಿಶ್ಚಿತತೆ: ಕುಸಿದ ಸಂವೇದಿ ಸೂಚ್ಯಂಕ   

ಮೇ 19ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. 61,729 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.48ರಷ್ಟು ಇಳಿಕೆ ದಾಖಲಿಸಿದೆ. 18,203 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.60ರಷ್ಟು ತಗ್ಗಿದೆ.

ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಉತ್ಸಾಹ ಹೆಚ್ಚಿದೆ, ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳಲ್ಲಿ ಉತ್ತಮ ಸಾಧನೆ ಕಂಡುಬಂದಿದೆ. ಹೀಗಿದ್ದರೂ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇರುವುದರಿಂದ ಸೂಚ್ಯಂಕಗಳು ಇಳಿಕೆ ದಾಖಲಿಸಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಫಾರ್ಮಾ ಸೂಚ್ಯಂಕ ಶೇ 3ರಷ್ಟು ಕುಸಿದಿದೆ. ಮಾಧ್ಯಮ ಸೂಚ್ಯಂಕ ಶೇ 2ರಷ್ಟು, ಅನಿಲ ಮತ್ತು ತೈಲ ಸೂಚ್ಯಂಕ ಶೇ 1.8ರಷ್ಟು ಇಳಿಕೆಯಾಗಿವೆ. ನಿಫ್ಟಿ ರಿಯಲ್ ಎಸ್ಟೇಟ್ ಮತ್ತು ಮಾಹಿತಿ ತಂತ್ರಜ್ಞಾನ ಸೂಚ್ಯಂಕ ತಲಾ ಶೇ 1ರಷ್ಟು ಜಿಗಿದಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹4,098.2 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು ₹677.45 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ADVERTISEMENT

ಏರಿಕೆ – ಇಳಿಕೆ: ಬಿಎಸ್‌ಇ ಲಾರ್ಜ್ ಕ್ಯಾಪ್‌ನಲ್ಲಿ ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್, ಅವೆನ್ಯೂ ಸೂಪರ್ ಮಾರ್ಟ್ಸ್‌, ಡಿವೀಸ್ ಲ್ಯಾಬೊರೇಟರಿಸ್, ಸೀಮನ್ಸ್ ಮತ್ತು ಎಸ್‌ಆರ್‌ಎಫ್ ಕುಸಿದಿವೆ. ಡಿಎಲ್‌ಎಫ್, ಟಾಟಾ ಮೋಟರ್ಸ್ ಡಿವಿಆರ್, ಹೀರೊ ಮೋಟೊಕಾರ್ಪ್, ನೈಕಾ, ಇಂಡಸ್ ಇಂಡ್‌ ಬ್ಯಾಂಕ್, ಪೇಟಿಎಂ, ಜೊಮಾಟೊ ಮತ್ತು ಇಂಡಿಯನ್ ಆಯಿಲ್ ಗಳಿಸಿಕೊಂಡಿವೆ.

ಮುನ್ನೋಟ: ಈ ವಾರ ಬಿಪಿಸಿಎಲ್, ಬಜಾಜ್ ಎಲೆಕ್ಟ್ರಿಕಲ್ಸ್, ಬಯೋಕಾನ್, ಬಿನ್ನಿ ಮಿಲ್ಸ್, ಡಿಕ್ಸಾನ್, ರೇಡಿಯೊ ಸಿಟಿ, ಟೈಮೆಕ್ಸ್, ಟಿಟಿಕೆ ಹೆಲ್ತ್, ಹಿಂಡಾಲ್ಕೊ, ಇಂಡಿಯಾ ಸಿಮೆಂಟ್ಸ್ ಲಿ., ಐಟಿಡಿಸಿ, ನೈಕಾ, ಪ್ರೂಡೆಂಟ್, ಸಿಂಗರ್, ವಂಡರ್ ಲಾ, ಎಚ್‌ಸಿಜಿ, ಐಆರ್‌ಎಫ್‌ಸಿ, ಪವರ್ ಇಂಡಿಯಾ, ಎಸ್ಎಐಎಲ್, ಜೀ, ಬಿಇಎಂಎಲ್, ಬಿಎಚ್‌ಇಎಲ್, ಇಂಡಿಗೊ ಪೇಂಟ್ಸ್, ಎನ್‌ಸಿಸಿ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಜಾಗತಿಕ ವಿದ್ಯಮಾನಗಳು, ದೇಶಿ ಬೆಳವಣಿಗೆಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.