
ಮುಂಬೈ: ವಿದೇಶಿ ನಿಧಿಯ ಹೊರಹರಿವು, ಬ್ಲೂ ಚಿಪ್ ಷೇರುಗಳ ಮಾರಾಟದ ಕಾರಣದಿಂದಾಗಿ ಭಾರತೀಯ ಷೇರು ಮಾರುಕಟ್ಟೆಗಳು ಕುಸಿತದೊಂದಿಗೆ ವಹಿವಾಟು ಆರಂಭಿಸಿದವು
30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 379.86 ಅಂಶ ಇಳಿಕೆಯಾಗಿ 84,258.03ಕ್ಕೆ ತಲುಪಿತ್ತು. 50-ಷೇರುಗಳ ಎನ್‌ಎಸ್‌ಇ ನಿಫ್ಟಿ 109.55 ಅಂಶಗಳಷ್ಟು ಏರಿಕೆಯಾಗಿ 25,899.80ಕ್ಕೆ ತಲುಪಿತ್ತು.
ಬಳಿಕ, ದಿಢೀರನೆ 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 244.98 ಅಂಶಗಳ ಇಳಿಕೆ ಕಂಡು 83,627.36ಕ್ಕೆ ತಲುಪಿತು. ನಿಫ್ಟಿ 74.30 ಅಂಶಗಳಷ್ಟು ಕುಸಿದು 25,716.70ಕ್ಕೆ ತಲುಪಿತು.
ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಎಲ್ ಅಂಡ್ ಟಿ, ಎಚ್‌ಸಿಎಲ್ ಟೆಕ್, ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್‌ಟೆಲ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಟಾಟಾ ಸ್ಟೀಲ್ ಪ್ರಮುಖವಾಗಿ ನಷ್ಟ ಕಂಡಿವೆ.
ದೇಶದ ಅತಿದೊಡ್ಡ ಐಟಿ ಸೇವೆಗಳ ರಫ್ತುದಾರ ಸಂಸ್ಥೆ ಟಿಸಿಎಸ್‌ನ ಲಾಭಾಂಶ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ13.91ರಷ್ಟು ಕುಸಿತ ಕಂಡಿದೆ.
ಐಟಿ ಸೇವೆಗಳ ಸಂಸ್ಥೆ ಎಚ್‌ಸಿಎಲ್ ಟೆಕ್ ಸೋಮವಾರ ಹಣಕಾಸು ವರ್ಷ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಏಕೀಕೃತ ನಿವ್ವಳ ಲಾಭದಲ್ಲಿ ಶೇ 11.2ರಷ್ಟು ಕುಸಿತ ಕಂಡು ₹4,076 ಕೋಟಿಗೆ ತಲುಪಿದೆ ಎಂದು ವರದಿ ತಿಳಿಸಿದೆ.
ಸೆನ್ಸೆಕ್ಸ್ ಪೈಕಿ ಎಟರ್ನಲ್, ಟೆಕ್ ಮಹೀಂದ್ರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಲಾಭ ಗಳಿಸಿವೆ.
ಈ ಮಧ್ಯೆ, ಚಿಲ್ಲರೆ ಹಣದುಬ್ಬರವು ಮೂರು ತಿಂಗಳ ಗರಿಷ್ಠ ಮಟ್ಟ ಶೇ 1.33ಕ್ಕೆ ತಲುಪಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ ₹3,638.40 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ, ಆದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹5,839.32 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ದತ್ತಾಂಶದಿಂದ ತಿಳಿದುಬಂದಿದೆ.
ಏಷ್ಯಾದ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ ಸೂಚ್ಯಂಕ, ಜಪಾನ್‌ನ ನಿಕ್ಕಿ 225 ಸೂಚ್ಯಂಕ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಏರಿಕೆಯಾಗಿ ವಹಿವಾಟು ನಡೆಸಿದರೆ, ಶಾಂಘೈನ ಎಸ್‌ಎಸಸಿ ಕಾಂಪೋಸಿಟ್ ಸೂಚ್ಯಂಕವು ಸ್ವಲ್ಪ ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.
ಅಮೆರಿಕ ಮಾರುಕಟ್ಟೆಗಳು ಸೋಮವಾರ ಏರಿಕೆಯೊಂದಿಗೆ ಕೊಲೆಗೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.