
ಮುಂಬೈ: ಸತತ ಎರಡನೇ ದಿನವೂ ಭಾರತೀಯ ಷೇರುಪೇಟೆಯಲ್ಲಿ ಕುಸಿತ ಕಂಡುಬಂದಿದೆ. ಜಾಗತಿಕ ಷೇರುಪೇಟೆಗಳಲ್ಲಿ ದುರ್ಬಲ ಪ್ರವೃತ್ತಿಯಿಂದಾಗಿ ಬ್ಯಾಂಕಿಂಗ್ ವಲಯದ ಷೇರುಗಳ ಮಾರಾಟವು ಈ ಕುಸಿತಕ್ಕೆ ಕಾರಣವಾಗಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 465.75 ಅಂಶಗಳಷ್ಟು ಕುಸಿದು 83,938.71ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ದಿನದ ವಹಿವಾಟಿನ ಸಮಯದಲ್ಲಿ ಇದು 498.8 ಅಂಶಗಳಷ್ಟು ಕುಸಿದಿತ್ತು.
ವಿದೇಶಿ ಬಂಡವಾಳದ ಹೊರಹರಿವು, ಕಾರ್ಪೊರೇಟ್ ಕಂಪನಿಗಳ ಲಾಂಭಾಂಶದ ಮಿಶ್ರ ಪ್ರತಿಕ್ರಿಯೆ ಮತ್ತು ಅಮೆರಿಕದ ಫೆಡರಲ್ ಬ್ಯಾಂಕ್‌ನ ಭವಿಷ್ಯದ ಬಡ್ಡಿ ಕಡಿತದ ಕುರಿತಾದ ಅನಿಶ್ಚಿತತೆ ಹೂಡಿಕೆದಾರರ ಕಳವಳಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಸೆನ್ಸಕ್ಸ್ ಸಂಸ್ಥೆಗಳ ಪೈಕಿ ಎಟರ್ನಲ್, ಎನ್‌ಟಿಪಿಸಿ, ಕೋಟಕ್ ಮಹೀಂದ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಪವರ್ ಗ್ರಿಡ್, ಟ್ರೆಂಟ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ನಷ್ಟ ಕಂಡರೆ, ಭಾರತ್ ಎಲೆಕ್ಟ್ರಾನಿಕ್ಸ್, ಲಾರ್ಸೆನ್ ಅಂಡ್ ಟೊಬ್ರೊ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಐಟಿಸಿ ಮತ್ತು ಸ್ಟೇಟ್ ಬ್ಯಾಂಕ್ ಇಂಡಿಯಾ ಲಾಭ ಗಿಸಿವೆ.
ಏಷ್ಯಾ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ, ಜಪಾನ್‌ನ ನಿಕ್ಕಿ 225 ಸೂಚ್ಯಂಕ ಏರಿಕೆ ಕಂಡರೆ, ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕ, ಹಾಂಗ್ ಕಾಂಗ್‌ನ ಹ್ಯಾಂಗ್‌ಸೆಂಗ್ ಸೂಚ್ಯಂಕ ಕುಸಿತ ದಾಖಲಿಸಿವೆ.
ವಿನಿಮಯ ಕೇಂದ್ರದ ಮಾಹಿತಿ ಪ್ರಕಾರ,
ವಿನಿಮಯ ದತ್ತಾಂಶದ ಪ್ರಕಾರ, ಗುರುವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ₹ 3,077.59 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆದರೂ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ₹2,469.34 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.