ADVERTISEMENT

ಏರಿಕೆಯೊಂದಿಗೆ ಷೇರುಪೇಟೆ ವಹಿವಾಟು ಆರಂಭ: ಸೆನ್ಸೆಕ್ಸ್ 200 ಅಂಶ ಜಿಗಿತ

ಪಿಟಿಐ
Published 1 ಜನವರಿ 2026, 5:24 IST
Last Updated 1 ಜನವರಿ 2026, 5:24 IST
ಲಾಭ ಗಳಿಕೆ ವಹಿವಾಟು ಸೂಚ್ಯಂಕ 200 ಅಂಶ ಇಳಿಕೆ
ಲಾಭ ಗಳಿಕೆ ವಹಿವಾಟು ಸೂಚ್ಯಂಕ 200 ಅಂಶ ಇಳಿಕೆ   

ಮುಂಬೈ: ಹೊಸ ವರ್ಷದ ಮೊದಲ ದಿನ ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯೊಂದಿಗೆ ವಹಿವಾಟು ಆರಂಭಿಸಿವೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರ ಸ್ಥಿರ ಖರೀದಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ಬ್ಲೂಚಿಪ್ ಷೇರುಗಳ ಖರೀದಿ ಭರಾಟೆಯು ಈ ಏರಿಕೆಗೆ ಕಾರಣ ಎಂದು ವರದಿ ತಿಳಿಸಿದೆ.

30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 223.54 ಅಂಶಗಳಷ್ಟು ಏರಿಕೆಯೊಂದಿಗೆ 85,444.14ರಲ್ಲಿ ವಹಿವಾಟು ಆರಂಭಿಸಿದರೆ, ಎನ್‌ಎಸ್ಇ ನಿಫ್ಟಿ 65.75 ಅಂಶಗಳ ಜಿಗಿತದೊಂದಿಗೆ 26,195.35ರಲ್ಲಿ ವಹಿವಾಟು ಆರಂಭಿಸಿದೆ.

ಸೆನ್ಸೆಕ್ಸ್ ಗುಚ್ಛದ ಸಂಸ್ಥೆಗಳ ಪೈಕಿ ಇಂಟರ್‌ಗ್ಲೋಬ್ ಏವಿಯೇಶನ್, ಮಹೀಂದ್ರ ಅಂಡ್ ಮಹೀಂದ್ರ, ಎಟರ್ನಲ್, ರಿಲಯನ್ಸ್ ಇಂಡಸ್ಟ್ರೀಸ್, ಎಲ್ ಅಂಡ್ ಟಿ, ಅಲ್ಟ್ರಾಟೆಕ್ ಸಿಮೆಂಟ್ ಅತಿ ಹೆಚ್ಚು ಲಾಭ ಗಳಿಸಿದ ಸಂಸ್ಥೆಗಳಾಗಿವೆ.

ADVERTISEMENT

ಐಟಿಸಿ, ಭಾರತ್ ಎಲೆಕ್ಟ್ರಾನಿಕ್ಸ್, ಟ್ರೆಂಟ್ ಮತ್ತು ಬಜಾಜ್ ಫೈನಾನ್ಸ್ ನಷ್ಟ ಕಂಡಿವೆ.

ವಿನಿಮಯ ದತ್ತಾಂಶದ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ ₹3,597.38 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹6,759.64 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ 0.78 ರಷ್ಟು ಕುಸಿದು 60.85 ಡಾಲರ್‌ಗೆ ತಲುಪಿದೆ.

ಏಷ್ಯಾ, ಅಮೆರಿಕ ಷೇರುಪೇಟೆಗಳು ಗುರುವಾರ ರಜೆ ಘೋಷಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.