ADVERTISEMENT

ಗಡಿ ಬಿಕ್ಕಟ್ಟು: ಭಾರಿ ಏರಿಳಿತ ಕಂಡ ಷೇರುಪೇಟೆ

ಪಿಟಿಐ
Published 17 ಜೂನ್ 2020, 11:19 IST
Last Updated 17 ಜೂನ್ 2020, 11:19 IST
stock
stock   

ಮುಂಬೈ:ಭಾರತ–ಚೀನಾ ಗಡಿ ಸಂಘರ್ಷ ಹಾಗೂ ಕೋವಿಡ್‌-19 ಪ್ರಕರಣಗಳಲ್ಲಿ ಆಗುತ್ತಿರುವ ಏರಿಕೆಯು ದೇಶದ ಷೇರುಪೇಟೆಗಳಲ್ಲಿ ಬುಧವಾರ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌, ದಿನದ ವಹಿವಾಟಿನಲ್ಲಿ 601 ಅಂಶಗಳಷ್ಟು ಏರಿಳಿತ ಕಂಡಿತು. ಅಂತಿಮವಾಗಿ 97 ಅಂಶಗಳ ಇಳಿಕೆಯೊಂದಿಗೆ 33,508 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 33 ಅಂಶ ಇಳಿಕೆಯಾಗಿ 9,881 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ದಿನದ ವಹಿವಾಟಿನಲ್ಲಿ ಕೋಟಕ್‌ ಬ್ಯಾಂಕ್‌ ಷೇರು ಶೇ 2ರಷ್ಟು ಇಳಿಕೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.