ಮುಂಬೈ: ಲೋಹ ವಲಯದ ಷೇರುಗಳ ಖರೀದಿ ಹೆಚ್ಚಳದ ಕಾರಣದಿಂದಾಗಿ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.
ಜಿಎಸ್‌ಟಿ ಮಂಡಳಿ ಸಭೆಯ ನಿರ್ಧಾರದ ಬಗ್ಗೆ ಹೂಡಿಕೆದಾರರು ಆಶಾವಾದ ಹೊಂದಿದ್ದಾರೆ. ಇದು ಸಹ ಸೂಚ್ಯಂಕಗಳ ಏರಿಕೆಗೆ ನೆರವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 409 ಅಂಶ ಹೆಚ್ಚಳವಾಗಿ, 80,567ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 135 ಅಂಶ ಏರಿಕೆಯಾಗಿ, 24,715ಕ್ಕೆ ಕೊನೆಗೊಂಡಿದೆ.
‘ಲೋಹ ಉತ್ಪಾದನೆ ಮೇಲೆ ಚೀನಾ ನಿಯಂತ್ರಣ ಹೇರುವ ಕ್ರಮದಿಂದಾಗಿ ಹಾಗೂ ಡಾಲರ್ ದುರ್ಬಲಗೊಂಡಿದ್ದರಿಂದಾಗಿ ಟಾಟಾ ಸ್ಟೀಲ್, ಎಸ್‌ಎಐಎಲ್, ಜಿಂದಾಲ್ ಸ್ಟೀಲ್ ಮತ್ತು ಹಿಂದೂಸ್ತಾನ್ ಕಾಪರ್ ಕಂಪನಿಗಳ ಷೇರಿನ ಮೌಲ್ಯ ಏರಿಕೆಯಾಗಿದೆ’ ಎಂದು ಲೆಮನ್ ಮಾರ್ಕೆಟ್ಸ್ ಡೆಸ್ಕ್‌ನ ಗೌರವ್ ಗಾರ್ಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.