ADVERTISEMENT

ಉಜ್ಜೀವನ್‌ ಬ್ಯಾಂಕ್‌ IPO; ಅರ್ಧ ದಿನದಲ್ಲೇ 10.17 ಕೋಟಿ ಷೇರುಗಳಿಗೆ ಬಿಡ್‌

ಏಜೆನ್ಸೀಸ್
Published 2 ಡಿಸೆಂಬರ್ 2019, 8:51 IST
Last Updated 2 ಡಿಸೆಂಬರ್ 2019, 8:51 IST
ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್ ಬ್ಯಾಂಕ್‌
ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್ ಬ್ಯಾಂಕ್‌   

ಬೆಂಗಳೂರು:ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್ ಬ್ಯಾಂಕ್‌ನ ₹750 ಕೋಟಿಆರಂಭಿಕ ಸಾರ್ವಜನಿಕ ನೀಡಿಕೆ(ಐಪಿಒ) ಸೋಮವಾರದಿಂದ ಆರಂಭವಾಗಿದ್ದು, ಅರ್ಧ ದಿನದಲ್ಲೇಶೇ 82 ರಷ್ಟು ಷೇರುಗಳಿಗೆ ಬಿಡ್ ಸಲ್ಲಿಕೆಯಾಗಿದೆ.

ಒಟ್ಟು 12.39 ಕೋಟಿ ಷೇರುಗಳ ಪೈಕಿ ಮೊದಲದಿನವೇ10.17 ಕೋಟಿ ಈಕ್ವಿಟಿ ಷೇರುಗಳಿಗೆ ಬಿಡ್‌ ಸಲ್ಲಿಕೆಯಾಗಿದೆ. ಡಿಸೆಂಬರ್‌ 4ಕ್ಕೆ ಐಪಿಒ ಕೊನೆಯಾಗಲಿದೆ.

ಭವಿಷ್ಯದ ಯೋಜನೆಗಳಿಗೆ ಅಗತ್ಯವಿರುವ ಹೂಡಿಕೆ ಹೊಂದಿಸಲು ಉಜ್ಜೀವನ್ಸ್ಮಾಲ್‌ ಫೈನಾನ್ಸ್ ಬ್ಯಾಂಕ್‌ ಐಪಿಒ ಮೂಲಕ ಸಾರ್ವಜನಿಕರಿಂದ ಹೂಡಿಕೆ ಪಡೆಯುತ್ತಿದೆ. ಪ್ರತಿ ಷೇರು ಬೆಲೆ ₹36 ರಿಂದ ₹37 ನಿಗದಿಯಾಗಿದ್ದು, ಕನಿಷ್ಠ 400 ಷೇರುಗಳಿಗೆ(₹ 14,400–₹ 14,800) ಬಿಡ್‌ ಸಲ್ಲಿಸಬಹುದಾಗಿದೆ.

ADVERTISEMENT

ರಿಟೇಲ್‌ ಹೂಡಿಕೆದಾರರಿಗೆ ಮೀಸಲಾಗಿದ್ದ ಷೇರುಗಳಿಗೆ 4.6ಪಟ್ಟು ಹೆಚ್ಚು ಬಿಡ್‌ ಸಲ್ಲಿಕೆಯಾಗಿದೆ. ಅಂದರೆ, ರಿಟೇಲ್‌ಹೂಡಿಕೆದಾರರಿಗೆಮೀಸಲಿದ್ದ ಎಲ್ಲ ಷೇರುಗಳು ಭರ್ತಿಯಾಗಿವೆ. ಅರ್ಹಸಾಂಸ್ಥಿಕ ಹೂಡಿಕೆದಾರರಿಂದ ಶೇ 3ರಷ್ಟು ಬಿಡ್‌ ಸಲ್ಲಿಕೆಯಾಗಿದೆ. ಉಜ್ಜೀವಲ್‌ ಫೈನಾನ್ಷಿಯಲ್‌ ಸರ್ವೀಸಸ್‌ ಷೇರುದಾರರಿಗೆ ₹ 75 ಕೋಟಿ ಮೌಲ್ಯದಉಜ್ಜೀವನ್‌ ಸ್ಮಾಲ್‌ ಫೈನಾನ್ಸ್ ಬ್ಯಾಂಕ್‌ ಐಪಿಒ ಮೀಸಲಿಡಲಾಗಿದ್ದು, ಶೇ 24ರಷ್ಟು ಬಿಡ್‌ ಸಲ್ಲಿಕೆಯಾಗಿದೆ.

ಗವರ್ನಮೆಂಟ್‌ ಆಫ್‌ ಸಿಂಗಪೂರ್‌, ಗೋಲ್ಡ್‌ಮ್ಯಾನ್‌ ಸಾಕ್ಸ್‌ ಇಂಡಿಯಾ, ಎಚ್‌ಡಿಎಫ್‌ಸಿ ಲೈಫ್‌ ಇನ್‌ಶ್ಯುರೆನ್ಸ್‌ ಕಂಪನಿ, ಮಾನೆಟರಿ ಅಥಾರಿಟಿ ಆಫ್‌ ಸಿಂಗಪೂರ್, ಸಿಎಕ್ಸ್‌ ಪಾರ್ಟ್ನರ್ಸ್‌ ಫಂಡ್‌, ಐಸಿಐಸಿಐ ಪ್ರುಡೆನ್ಷಿಯಲ್‌ ಸೇರಿದಂತೆ ಹದಿನೆಂಟು ಸಾಂಸ್ಥಿಕ ಹೂಡಿಕೆದಾರರಿಂದ ಈಗಾಗಲೇ ಉಜ್ಜೀವನ್‌ ಬ್ಯಾಂಕ್‌ ₹ 303.75 ಕೋಟಿ ಹೂಡಿಕೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.