ADVERTISEMENT

ರಾಮಾಯಣವೇ ಜೀವನ ಮತ್ತು ಆದರ್ಶ: 'ರಾಮಾಯಣ ರಸಯಾನ' ಪ್ರಜಾವಾಣಿ ಅಂಕಣ ಇಲ್ಲಿ ಓದಿ

ಪ್ರಜಾವಾಣಿ ವಿಶೇಷ
Published 19 ಜನವರಿ 2024, 9:09 IST
Last Updated 19 ಜನವರಿ 2024, 9:09 IST
   

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಈ ಹಂತದಲ್ಲಿ ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣದ ಕುರಿತಾಗಿಯೂ ಚರ್ಚೆಯಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಎಸ್.ಸೂರ್ಯಪ್ರಕಾಶ್ ಪಂಡಿತ್ ಅವರು ಬರೆದ "ರಾಮಾಯಣ ರಸಯಾನ" ಎಂಬ ಅಂಕಣ ಬರಹ ಮತ್ತು ಅದಕ್ಕೆ ಪೂರಕವಾಗಿ ಬಿ.ಕೆ.ಎಸ್.ವರ್ಮಾ ಅವರ ಚಿತ್ರ - ಇವೆರಡೂ ಓದುಗರ ಮನ್ನಣೆಗೆ ಪಾತ್ರವಾಗಿದ್ದವು.

ಆದಿಕಾವ್ಯವಾದ ರಾಮಾಯಣ ಜಗತ್ತಿನ ಶ್ರೇಷ್ಠ ಕಾವ್ಯವೂ ಹೌದು. ರಾಮಾಯಣದ ಅಂತರಂಗದಲ್ಲಿ ಹಲವು ರಸಗಳ ಒರತೆಯಿದೆ; ಸಾಮಾಜಿಕ ತಲ್ಲಣಗಳಿವೆ; ರಾಜಕೀಯದ ಸಂಕ್ಷೋಭೆಗಳಿವೆ; ಶಾಸ್ತ್ರಗಳ ಅನುಸಂಧಾನವಿದೆ; ಜಾನಪದದ ಸಂವೇದನೆಗಳಿವೆ; ಭಾವಗಳ ಬೆದಕಾಟವಿದೆ; ಧನ್ಯತೆಯ ತಡಕಾಟವಿದೆ; ಜೀವನಕ್ಕೆ ಬೇಕಾದ ಆದರ್ಶಗಳಿವೆ; ಅಧ್ಯಾತ್ಮದ ಬೆಳಕಿದೆ; ಎಲ್ಲಕ್ಕಿಂತಲೂ ಮಿಗಿಲಾಗಿ ರಾಮಾಯಣವೇ ಜೀವನ ಎನಿಸಿದೆ.

ಈ ಎಲ್ಲ ದಾರಿಗಳ ಸಂಗಮವೇ ‘ರಾಮಾಯಣ ರಸಯಾನ’.

ADVERTISEMENT

ಎಲ್ಲ ಅಂಕಣಗಳನ್ನು ನೀವು ಇಲ್ಲಿ ಓದಬಹುದು: https://www.prajavani.net/ramayana-rasayana

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.