ADVERTISEMENT

ಕೃಷ್ಣ, ನಳ ಮಹಾರಾಜರಿಗೂ ವರವಾಯಿತು ಅಂಗಾರಕ ಸಂಕಷ್ಟಿ ಆಚರಣೆ

ಎಲ್.ವಿವೇಕಾನಂದ ಆಚಾರ್ಯ
Published 6 ಜನವರಿ 2026, 5:26 IST
Last Updated 6 ಜನವರಿ 2026, 5:26 IST
   

ಇಂದು (ಮಂಗಳವಾರ) ಸಂಕಷ್ಟಹರ ಗಣಪತಿಯನ್ನು ವಿಶೇಷವಾಗಿ ಆರಾಧಿಸುವ ಅಂಗಾರಕ ಸಂಕಷ್ಟಿ. ಮಂಗಳವಾರ ಚತುರ್ಥಿ ಬಂದರೆ ಇದನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. 

ಅಂಗಾರಕ ಸಂಕಷ್ಟಿಯ ದಿನದ ಬಗ್ಗೆ ಕೆಲವು ಪುರಾಣದ ಕಥೆಗಳೂ ಇವೆ. 

ಪುರಾಣ ಕಥೆಗಳ ಪ್ರಕಾರ, ವನವಾಸದಲ್ಲಿ ಇದ್ದ ಪಾಂಡವರು ಸಂಕಷ್ಟ ಹರ ಚತುರ್ಥಿಯಂದು ಗಣೇಶನನ್ನು ಪ್ರಾರ್ಥಿಸುತ್ತಾ ಬಂದಿದ್ದರಿಂದ ಒಂದೊಂದಾಗಿ ಅವರ ಸಮಸ್ಯೆಗಳು ನಿವಾರಣೆಯಾಗಿ ಯುದ್ಧದಲ್ಲಿ ಜಯಸಿ ಮತ್ತೆ ರಾಜ್ಯಭಾರ ಮಾಡಿದರು ಎನ್ನಲಾಗುತ್ತದೆ. 

ADVERTISEMENT

ಇನ್ನೊಂದು ಕಥೆಯಲ್ಲಿ, ಗಾಂಧರ್ವ ವಿವಾಹವಾಗಿ ಶಾಪದಿಂದ ಕಳೆದುಕೊಂಡಿದ್ದ ದಮಯಂತಿಯನ್ನು ನಳ ಮಹಾರಾಜನು ಈ ಸಂಕಷ್ಟಹರ ಚತುರ್ಥಿಯನ್ನು ಆಚರಿಸಿದ್ದರಿಂದ ತನಗೆ ಬಂದಿರುವ ಶನಿದೋಷವನ್ನು ನಿವಾರಿಸಿಕೊಂಡು ಮತ್ತೆ ದಮಯಂತಿಯನ್ನು ಪಡೆದು ರಾಜ್ಯಭಾರ ಮಾಡಿದನು ಎಂದೂ ಹೇಳಲಾಗುತ್ತದೆ.

ಶ್ರೀ ಕೃಷ್ಣನು ಇದೇ ಚತುರ್ಥಿಯಂದು ಶಮಂತಕ ಮಣಿಯನ್ನು ಪಡೆದು ಜಾಂಬವತಿಯನ್ನು ವಿವಾಹವಾದನು ಎಂದೂ ಪುರಾಣದಲ್ಲಿ ಹೇಳಲಾಗಿದೆ.

ಪ್ರತಿ ತಿಂಗಳಲ್ಲಿ ಬರುವ ಎರಡು ಚತುರ್ಥಿಗಳಲ್ಲಿ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟಹರ ಚತುರ್ಥಿ ಎಂದು, ಅಮಾವಾಸ್ಯೆಯ ನಂತರ ಬರುವ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.