
ಪ್ರತಿ ವರ್ಷ ಮಾಲೆ ಧರಿಸಿಕೊಂಡು ಶಬರಿಮಲೆಗೆ ಭೇಟಿ ನೀಡುತ್ತಾರೆ. ಇಲ್ಲಿ ನೆಲೆಸಿರುವ ಅಯ್ಯಪ್ಪಸ್ವಾಮಿಗೆ ಭಕ್ತಿಯಿಂದ ನಮಿಸುತ್ತಾರೆ. ಹಾಗಿದ್ದರೆ, ಅಯ್ಯಪ್ಪ ಸ್ವಾಮಿ ಪೂಜೆಯ ಹಿಂದಿರುವ ಪುರಾಣ ಕಥೆ ಮತ್ತು ಪೂಜೆಯ ಮಹತ್ವ ಏನು ಎಂಬುದನ್ನು ತಿಳಿಯೋಣ.
ಪುರಾಣ ಕಥೆಗಳ ಪ್ರಕಾರ ತೇತ್ರಾಯುಗದಲ್ಲಿ ಶ್ರೀ ರಾಮನ ಬರುವುವಿಕೆಗಾಗಿ ಕಾಯುತ್ತಿದ್ದ ಶಬರಿ ವಾಸಿಸುತ್ತಿದ್ದ ಸ್ಥಳವೇ ಇಂದು ಶಬರಿಮಲೆಯಾಗಿದೆ.
ಅಯ್ಯಪ್ಪ ಮತ್ತು ಶನಿ ದೇವರ ನಡುವೆ ಒಂದು ಒಪ್ಪಂದವಾಗಿರುತ್ತದೆ. ಅಯ್ಯಪ್ಪನು ತನ್ನ ಭಕ್ತರಿಗೆ ಶನಿ ಕಾಡದಂತೆ ವಚನ ತೆಗೆದುಕೊಳ್ಳುತ್ತಾರೆ. ಅದರಂತೆ ಶನಿಯು ಯಾರು 41 ದಿನಗಳ ಕಾಲ ಕಪ್ಪು ಬಟ್ಟೆ ಧರಿಸಿ ಅಯ್ಯಪ್ಪನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರ ಮೇಲೆ ನನ್ನ ಕೋಪ ಕಡಿಮೆ ಮಾಡುತ್ತೇನೆ, ಎಂದು ಒಪ್ಪಂದವಾಗುತ್ತದೆ. ಆ ಕಾರಣಕ್ಕಾಗಿಯೇ ಪ್ರತಿ ವರ್ಷ ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ಕೊಟ್ಟು ಅಯ್ಯಪ್ಪನಿಗೆ ಭಕ್ತಿ ಸಮರ್ಪಿಸುತ್ತಾರೆ.
ಅಯ್ಯಪ್ಪ ಮಾಲಾಧಾರಿಗಳು ಪಾಲಿಸಬೇಕಾದ ನಿಯಮಗಳು:
ಹಾಸಿಗೆ ಮೇಲೆ ಮಲಗದೆ, ಚಾಪೆಯ ಮೇಲೆ ಮಲಗಬೇಕು.
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ತಣ್ಣೀರಿನ ಸ್ನಾನ ಮಾಡಿ, ನಂತರ ಅಯ್ಯಪ್ಪನ ಪ್ರಾರ್ಥನೆ ಮಾಡಬೇಕು.
ಸಸ್ಯಹಾರ ಮಾತ್ರ ಸೇವನೆ ಮಾಡಬೇಕು.
ಜಗಳ, ಮನಸ್ತಾಪ, ಕೆಟ್ಟ ಶಬ್ದಗಳನ್ನು ಮಾತನಾಡಬಾರದು.
ಮಹಿಳೆಯರು ಮಾಡಿದ ಅಡುಗೆ ಸೇವಿಸಬಾರದು. ಸ್ವತಃ ಮಾಲಾಧಾರಿಗಳೇ ಅಡುಗೆ ಮಾಡಿಕೊಂಡು ಸೇವನೆ ಮಾಡಬೇಕು.
ಒಮ್ಮೆ ಮಾಲೆ ಧರಿಸಿದ ಬಳಿಕ ಪದೇ ಪದೇ ಮಾಲೆಯನ್ನು ತೆಗೆಯಬಾರದು. ಮಾಲೆಯನ್ನು ಗುರುಸ್ವಾಮಿ ಮಾತ್ರ ತೆಗೆಯಬೇಕು.
ಅಯ್ಯಪ್ಪನ ದರ್ಶನಕ್ಕೆ ಹೋಗುವವರು ಕನಿಷ್ಠ 5 ಕಿ.ಮೀಯಾದರೂ ನಡೆಯಬೇಕು.
ಅಯ್ಯಪ್ಪ ಮಾಲೆ ಮತ್ತು ಇರುಮುಡಿ ಧರಿಸಿದವರಿಗೆ ಮಾತ್ರ, ಅಯ್ಯಪ್ಪನ 18 ಮೆಟ್ಟಿಲುಗಳನ್ನು ಹತ್ತಲು ಅವಕಾಶವಿರುತ್ತದೆ.
ಇರುಮುಡಿ ಕಟ್ಟದೆ ಅಯ್ಯಪ್ಪನಿಗೆ ಭೇಟಿ ನೀಡುವವರಿಗೆ 18 ಮೆಟ್ಟಿಲುಗಳನ್ನು ಹತ್ತಲು ಅವಕಾಶವಿರುವುದಿಲ್ಲ.
ಈ ಮೇಲಿನ ನಿಯಮಗಳನ್ನು ಯಾರು ಶ್ರದ್ದೆಯಿಂದ ಪಾಲಿಸುತ್ತಾರೋ ಅವರಿಗೆ ಅಯ್ಯಪ್ಪನ ಆಶೀರ್ವಾದ ಲಭಿಸುವುದರೊಂದಿಗೆ ಶನಿದೋಷ ನಿವಾರಣೆಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.