ADVERTISEMENT

ಪ್ರಜಾವಾಣಿ ನವವರ್ಣ–2023 | ಶಕ್ತಿ ಸ್ವರೂಪವಾದ ಕೆಂಪುಬಣ್ಣದ ಸೀರೆಯಲ್ಲಿ ನಾರಿಯರು

ಪ್ರಜಾವಾಣಿ ವಿಶೇಷ
Published 18 ಅಕ್ಟೋಬರ್ 2023, 6:50 IST
Last Updated 18 ಅಕ್ಟೋಬರ್ 2023, 6:50 IST
   

ನವರಾತ್ರಿಯ ಮೂರನೇ ದಿನ ಜಗನ್ಮಾತೆಯನ್ನು ಚಂದ್ರಘಂಟಾ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಸಿಂಹವಾಹಿನಿಯಾಗಿ ದೇವಿಯು ತನ್ನ ಹತ್ತು ಕೈಗಳಲ್ಲಿ ಖಡ್ಗ, ಬಿಲ್ಲು–ಬಾಣ, ತ್ರಿಶೂಲ ಮುಂತಾದ ಆಯುಧಗಳನ್ನು ಹಿಡಿದಿದ್ದಾಳೆ. ಇವು ದೇವಿಯ ದುಷ್ಟಶಿಕ್ಷಣ ಮತ್ತು ಶಿಷ್ಟರಕ್ಷಣದ ಸಂಕಲ್ಪಗಳನ್ನು ಪ್ರಕಟಿಸುತ್ತವೆ. ಕೆಂಪುಬಣ್ಣವು ಲೋಕಮಾತೆಯ ಸಂಹಾರಶಕ್ತಿಗೂ ಸಂರಕ್ಷಣಶಕ್ತಿಗೂ ಸಂಕೇತ. ಶಕ್ತಿಯ ಸ್ವರೂಪವಾಗಿರುವ ಕೆಂಪುಬಣ್ಣದ ಸೀರೆಯಲ್ಲಿ ಸಂಭ್ರಮಿಸಿರುವ ಸಾರಿಯರ ಕೆಲವು ಚಿತ್ರಗಳು ಇಲ್ಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.