ADVERTISEMENT

ದೈನಂದಿನ ರಾಶಿ ಭವಿಷ್ಯ ‌‌|‌‌‌‌‌‌ ಬುಧವಾರ, ಏಪ್ರಿಲ್ 28, 2020

ಪ್ರಜಾವಾಣಿ ವಿಶೇಷ
Published 29 ಏಪ್ರಿಲ್ 2020, 0:47 IST
Last Updated 29 ಏಪ್ರಿಲ್ 2020, 0:47 IST
   

ಮೇಷ

ಕೃಷಿ ಕಾರ್ಯಗಳಿಗಾಗಿ ಧನ ವಿನಿಯೋಗ ಮಾಡಬೇಕಾದೀತು. ಸಿಹಿ ಪದಾರ್ಥಗಳ ವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರದಿಂದಾಗಿ ಸಮಾಧಾನಕರ ಲಾಭ ದೊರಕಲಿದೆ.

ವೃಷಭ

ADVERTISEMENT

ಕುಟುಂಬದಲ್ಲಿ ಸುಖ–ಸಂತೋಷ ನೆಮ್ಮದಿಯನ್ನು ಕಾಣಲಿದ್ದೀರಿ. ಹಿತೈಷಿಗಳೊಂದಿಗೆ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಓದಿನ ವಿಷಯದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ.

ಮಿಥುನ

ಅರೆಕಾಲಿಕ ನೌಕರರಿಗೆ ಸುದಿನವಾಗಿ ಪರಿಣಮಿಸಲಿದೆ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿ ವರ್ಗದವರಿಗೆ ಉತ್ತಮ ದಿನ. ಮಗಳ ಸಲುವಾಗಿ ಉಳಿತಾಯ ಮಾಡುವುದು ಉತ್ತಮ.

ಕಟಕ

ವಿದೇಶಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುವ ವಿಚಾರದಲ್ಲಿ ಸ್ನೇಹಿತರು, ಬಂಧು ಬಾಂಧವರೊಂದಿಗೆ ಚರ್ಚೆ ನಡೆಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಕಾಪಾಡುವಿರಿ.

ಸಿಂಹ

ರಾಜಕೀಯ ಉನ್ನತಿಗಾಗಿ ಚಿಂತನ–ಮಂತನ ನಡೆಸಲಿದ್ದೀರಿ. ಹೆಚ್ಚಿನ ಪರಿಶ್ರಮದಿಂದ ಕೆಲಸ–ಕಾರ್ಯಗಳಲ್ಲಿ ಯಶಸ್ಸು. ವ್ಯವಹಾರದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವಿರಿ.

ಕನ್ಯಾ

ಸರ್ಕಾರದಿಂದ ಆಗಬೇಕಾದ ಕೆಲಸದ ವಿಚಾರದಲ್ಲಿ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಸಹಾಯ ದೊರಕಲಿದೆ. ಶತ್ರುಗಳ ಬಾಧೆ ನಿವಾರಣೆಯಾಗಲಿದೆ. ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಚಿಂತೆ ಎದುರಾಗಲಿದೆ.

ತುಲಾ

ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ದೊರಕುವ ಸಾಧ್ಯತೆ ಇದ್ದು ಸ್ವಯಂ ತರಬೇತಿ ತರಗತಿಗಳನ್ನು ನಡೆಸುವ ಯೋಜನೆಯು ಕೈಗೂಡಲಿದೆ. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ ವಿನಿಯೋಗ ಮಾಡಬೇಕಾದೀತು.

ವೃಶ್ಚಿಕ

ವಾಹನ ಮಾರಾಟದಲ್ಲಿ ತೊಡಗಿದವರಿಗೆ ಆಶಾದಾಯಕವಾಗಲಿದೆ. ಕಳೆದುಕೊಂಡ ವಸ್ತುವೊಂದು ಪುನಃ ಕೈ ಸೇರುವ ಸಾಧ್ಯತೆ‌. ಕ್ರೀಡಾಪಟುಗಳಿಗೆ ಉತ್ತಮ ಆಸಕ್ತಿ ಮೂಡುವುದರ ಜೊತೆಗೆ ಅವಕಾಶಗಳು ತೆರೆದುಕೊಳ್ಳಲಿವೆ.

ಧನು

ಉದ್ಯೋಗಸ್ಥ ಮಹಿಳೆಯರಿಗೆ ಆದಾಯದಲ್ಲಿ ವೃದ್ಧಿ. ಕೆಲಸ–ಕಾರ್ಯಗಳಲ್ಲಿ ಒತ್ತಡ. ಗುರುಹಿರಿಯರ ಆಶೀರ್ವಾದ ಪಡೆಯುವಿರಿ. ಧಾನ್ಯ ಮಾರಾಟಗಾರರಿಗೆ ಉತ್ತಮ ವ್ಯಾಪಾರದಿಂದಾಗಿ ಆದಾಯದಲ್ಲಿ ಹೆಚ್ಚಳ.

ಮಕರ

ಆರ್ಥಿಕ ಸದೃಢತೆಯಿಂದಾಗಿ ಆಸ್ತಿ ಖರೀದಿ ಮಾಡುವ ಸಾಧ್ಯತೆ. ವಿದ್ಯಾರ್ಥಿಗಳು ಮುಂದಿನ ಅಭ್ಯಾಸದ ವಿಚಾರದಲ್ಲಿ ಅತ್ಯಂತ ಕುತೂಹಲ ಮತ್ತು ಮುತುವರ್ಜಿ ವಹಿಸಲಿದ್ದೀರಿ. ರೈತಾಪಿ ವರ್ಗದವರಿಗೆ ಉತ್ತಮ ಬೆಳೆಯ ನಿರೀಕ್ಷೆ.

ಕುಂಭ

ಕೇಂದ್ರ ಸರ್ಕಾರದ ಹುದ್ದೆಯೊಂದು ದೊರಕುವ ಸಾಧ್ಯತೆ ಇದ್ದು ತನ್ನಿಮಿತ್ತ ವಿಶೇಷವಾದ ಯತ್ನ ಮಾಡಬೇಕಾದೀತು. ಆದಾಯದಲ್ಲಿ ಹೆಚ್ಚಳದಿಂದಾಗಿ ನೆಮ್ಮದಿ. ಹಿರಿಯರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ.

ಮೀನ

ಸಗಟು ವ್ಯಾಪಾರಗಳಲ್ಲಿ ಸ್ವಲ್ಪಮಟ್ಟಿನ ಪ್ರಗತಿ ಕಂಡುಬರಲಿದ್ದು ಆದಾಯದಲ್ಲಿ ಹೆಚ್ಚಳವಾಗಲಿದೆ. ನೌಕರಿಯಲ್ಲಿರುವವರಿಗೆ ಬಿಡುವು ದೊರಕುವ ಸಾಧ್ಯತೆ. ಮಕ್ಕಳಿಗಾಗಿ ಅಧಿಕ ವ್ಯಯವನ್ನು ಮಾಡಬೇಕಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.