ADVERTISEMENT

PHOTOS | ಸರೋವರ ಕ್ಷೇತ್ರ ಅನಂತಪುರದ ದೇವರ ಮೊಸಳೆ ಬಬಿಯಾ ಇನ್ನಿಲ್ಲ

ಕೇರಳದ ಕಾಸರಗೋಡು ಜಿಲ್ಲೆಯ ಪ್ರಸಿದ್ಧ ಸರೋವರ ಕ್ಷೇತ್ರ ಅನಂತಪುರದ ದೇವರ ಮೊಸಳೆ ಬಬಿಯಾ ಭಾನುವಾರ ರಾತ್ರಿ ಮೃತಪಟ್ಟಿದೆ.ಸರೋವರದ ಮಧ್ಯಭಾಗದಲ್ಲಿ ಅನಂತಪುರ ದೇವಸ್ಥಾನವಿದೆ. ಇಲ್ಲಿಗೆ ಬರುವ ಭಕ್ತರಿಗೆ ಈ ಮೊಸಳೆ ಪ್ರಮುಖ ಆಕರ್ಷಣೆಯಾಗಿತ್ತು.

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 10:34 IST
Last Updated 10 ಅಕ್ಟೋಬರ್ 2022, 10:34 IST
ಕಾಸರಗೋಡು ಜಿಲ್ಲೆಯ ಸರೋವರ ಕ್ಷೇತ್ರ ಅನಂತಪುರದ ದೇವರ ಮೊಸಳೆ 'ಬಬಿಯಾ' ಭಾನುವಾರ ರಾತ್ರಿ ಮೃತಪಟ್ಟಿದೆ.
ಕಾಸರಗೋಡು ಜಿಲ್ಲೆಯ ಸರೋವರ ಕ್ಷೇತ್ರ ಅನಂತಪುರದ ದೇವರ ಮೊಸಳೆ 'ಬಬಿಯಾ' ಭಾನುವಾರ ರಾತ್ರಿ ಮೃತಪಟ್ಟಿದೆ.   
ಇಲ್ಲಿಗೆ ಬರುವ ಭಕ್ತರಿಗೆ ಈ ಮೊಸಳೆ ಪ್ರಮುಖ ಆಕರ್ಷಣೆಯಾಗಿತ್ತು. (ಚಿತ್ರ ಕೃಪೆ: ಅನಂತಪುರ ದೇವಸ್ಥಾನ)
ಸರೋವರದ ಮಧ್ಯಭಾಗದಲ್ಲಿ ಅನಂತಪುರ ದೇವಸ್ಥಾನವಿದೆ. (ಚಿತ್ರ ಕೃಪೆ: ಅನಂತಪುರ ದೇವಸ್ಥಾನ)
ಅರ್ಚಕರು ಪೂಜೆಯ ನಂತರ ಕೊಡುವ ಪ್ರಸಾದವನ್ನು ಬಬಿಯಾ ಮೊಸಳೆ ಸೇವಿಸುತ್ತಿತ್ತು.
ಭಕ್ತರಲ್ಲಿ ಅಚ್ಚರಿಗೆ ಕಾರಣವಾಗಿದ್ದ ಬಬಿಯಾ ಮೊಸಳೆ
ಈ ಮೊಸಳೆ ಇಲ್ಲಿಗೆ ಹೇಗೆ ಬಂತು ಎಂಬುದು ಯಾರಿಗೂ ತಿಳಿದಿಲ್ಲ.
ಈ ಮೊದಲು ಇದ್ದ ಬಬಿಯಾ ಎಂಬ ಮೊಸಳೆಯನ್ನು ಬ್ರಿಟಿಷ್‌ ಅಧಿಕಾರಿಗಳು ಹೊಡೆದು ಕೊಂದಿದ್ದರು. ಇದಾದ ಕೆಲ ದಿನಗಳ ನಂತರ ಮತ್ತೊಂದು ಮೊಸಳೆ ಈ ಸರೋವರದಲ್ಲಿ ಕಾಣಿಸಿಕೊಂಡಿತ್ತು ಎಂದು ಹಿರಿಯರು ಹೇಳುವ ಮಾತು. (ಚಿತ್ರ ಕೃಪೆ: ಅನಂತಪುರ ದೇವಸ್ಥಾನ)
ಬಬಿಯಾ ಮೊಸಳೆಯ ಅಂತಿಮ ದರ್ಶನಕ್ಕೆ ಸಾವಿರಾರು ಭಕ್ತರು ಸೇರಿದ್ದರು.
ಭಕ್ತರ ಪ್ರೀತಿಗೆ ಪಾತ್ರವಾಗಿದ್ದ ಬಬಿಯಾ ಮೊಸಳೆ ಇನ್ನಿಲ್ಲ
ಅನಂತಪುರ ಸರೋವರ ಕ್ಷೇತ್ರ (ಚಿತ್ರ ಕೃಪೆ: ಅನಂತಪುರ ದೇವಸ್ಥಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.