ಎಐ ಚಿತ್ರ
ನವರಾತ್ರಿಯ 5ನೇ ದಿನದಂದು ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಪಾರ್ವತಿಯ ಮತ್ತೊಂದು ಅವತಾರವೆ ಈ ಸ್ಕಂದ ಮಾತೆ. ಪಂಚಮಿಯ ದಿನದಂದು ಪೂಜಿಸಲಾಗುವ ಸ್ಕಂದ ಮಾತೆಯು ಸುಬ್ರಹ್ಮಣ್ಯನ ತಾಯಿ ಎಂದು ಹೇಳಲಾಗುತ್ತದೆ. ಆರೋಗ್ಯ ಮತ್ತು ಸಂಪತ್ತಿನ ಪ್ರತೀಕವಾಗಿರುವ ಈ ದೇವಿಯು ದೇವತೆಗಳ ಸೈನ್ಯದ ನಾಯಕಿ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಸ್ಕಂದ ಮಾತೆಯ ರೂಪ
ಮೂರು ಕಣ್ಣುಗಳನ್ನು ಹೊಂದಿರುವ ದೇವಿಯು ಕಮಲದ ಮೇಲೆ ಕುಳಿತು ಜ್ವಾಲಾಮುಖಿಯಂತೆ ಪ್ರಜ್ವಲಿಸುತ್ತಾಳೆ. ದೇವಿಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಬಡತನ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ.
ಬಣ್ಣ: ಹಸಿರು
ಪೂಜಾ ಸಮಯ ಯಾವುದು:
ಬೆಳಿಗ್ಗೆ 9 ರಿಂದ 10.20 ರವರೆಗೆ ಹಾಗೂ ಸಂಜೆ 6 ರಿಂದ ರಾತ್ರಿ 9 ರವರೆಗೆ ದೇವಿಯನ್ನು ಪೂಜಿಸಲು ಸರಿಯಾದ ಸಮಯ. ಪಾರಿಜಾತ ಹೂವಿನಿಂದ ದೇವಿಯನ್ನು ಪೂಜಿಸುವುದರಿಂದ ಒಳಿತಾಗುತ್ತದೆ.
ನೈವೇದ್ಯ:
ದೇವಿಗೆ ಕೋಸಂಬರಿ, ಕಡಲೆ ಬೇಳೆ ಉಸ್ಲಿ, ಬಿಳಿ ಪೊಂಗಲ್ ಅಥವಾ ಮೊಸರು ಅನ್ನವನ್ನು ನೈವೇದ್ಯಕ್ಕೆ ಇಡಬಹುದು. ದೇವರ ಮನೆಯಲ್ಲಿ ಅಕ್ಕಿ ಹಿಟ್ಟಿನ ರಂಗೋಲಿಯನ್ನು ಹಾಕಬೇಕುವುದರಿಂದ ಒಳಿತಾಗಿದೆ.
ಸರಳ ಮಂತ್ರ:
ಓಂ ದೇವಿ ಸ್ಕಂದಮಾತಾಯೇ ನಮಃ
ಓಂ ನಮೋ ನಾರಾಯಣಿಯೇ ನಮಃ
ಓಂ ನಮೋ ಸ್ಕಂದಮಾತಾಯ ನಮಃ
ಓಂ ನಮೋ ಮೋಹಿನಿಯೆ ನಮಃ
ಓಂ ನಮೋ ಸರ್ವ ಮಂಗಳ ಕಾರುಣಿಯೇ ನಮಃ
ಯಾ ದೇವಿ ಸರ್ವಭೂತೇಶು ಮಾಸ್ಕಂದಮಾತ ರೂಪೇಣ ಸಂಸ್ಥಿತಾ!
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋನಮಃ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.