ADVERTISEMENT

ರಕ್ಷಾಬಂಧನ 2025: ಸಹೋದರರಿಗೆ ರಾಖಿ ಕಟ್ಟುವುದು ಯಾಕೆ, ಹೇಗೆ?

ಎಲ್.ವಿವೇಕಾನಂದ ಆಚಾರ್ಯ
Published 8 ಆಗಸ್ಟ್ 2025, 12:19 IST
Last Updated 8 ಆಗಸ್ಟ್ 2025, 12:19 IST
   

ರಕ್ಷಾ ಬಂಧನ ಹಬ್ಬವು ಸಹೋದರ ಸಹೋದರಿಯರ ನಡುವಿನ ಪ್ರೀತಿ ವಿಶ್ವಾಸ ಹಾಗೂ ರಕ್ಷಣೆಯ ಸಂಕೇತವಾದ ಹಬ್ಬ. ಇದನ್ನು ಸಹೋದರರ ದೀರ್ಘಾಯುಷ್ಯ, ಪ್ರಗತಿ ಮತ್ತುಉತ್ತಮ ಆರೋಗ್ಯವನ್ನು ಬಯಸಿ ರಾಖಿ ಕಟ್ಟುತ್ತಾರೆ. 2025ರ ರಕ್ಷಾ ಬಂಧನವು ಶ್ರಾವಣ ಮಾಸದ ಹುಣ್ಣಿಮೆಯಾಗಿರುವ ಆಗಸ್ಟ್ 09ರ ಶನಿವಾರ ಆಚರಿಸಲಾಗುತ್ತಿದೆ. ಇದರ ಮುಹೂರ್ತವು ಬೆಳಿಗ್ಗೆ 5.47ಕ್ಕೆ ಆರಂಭವಾಗಿ 1.24ರವರೆಗೆ ಇರುತ್ತದೆ.

ಈ ರಕ್ಷಾ ಬಂಧನ ಹಬ್ಬವನ್ನು ಪ್ರತಿವರ್ಷ ಶ್ರಾವಣ ಪೂರ್ಣಿಮೆಯ ತಿಥಿಯಂದು ಆಚರಿಸಲಾಗುತ್ತದೆ.

ರಾಕಿ ಹಬ್ಬದ ಆಚರಣೆ ವಿಧಾನ

ADVERTISEMENT

ಈ ದಿನದಂದು ಸಹೋದರ ಸಹೋದರಿಯರು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು.

ಶುದ್ಧವಾದ ತಟ್ಟೆ ತೆಗೆದುಕೊಂಡು ಅದರ ಮೇಲೆ ಶುದ್ಧವಾದ ಬಟ್ಟೆ ಹಾಕಿ ತಟ್ಟೆಯಲ್ಲಿ ಕಲಶ, ತೆಂಗಿನ ಕಾಯಿ,ವೀಳ್ಯದೆಲೆ, ಕುಂಕುಮ, ಶ್ರೀಗಂಧ, ಅಕ್ಷತೆ, ಮೊಸರು ಹಾಗೂ ರಾಖಿಯೊಟ್ಟಿಗೆ ಸಿಹಿತಿಂಡಿಯನ್ನು ಇರಿಸಿ.

ದೇವರಿಗೆ ತುಪ್ಪದ ದೀಪ ಬೆಳಗಿಸಿ ರಾಖಿ ಕಟ್ಟಲು ಮೇಲೆ ಹೇಳಿದ ಶುಭ ಮುಹೂರ್ತದಲ್ಲಿ ನಿಮ್ಮ ಸಹೋದರರನ್ನು ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಲು ಹೇಳಿ.

ಇದಾದ ನಂತರ ಸಹೋದರನಿಗೆ ತಿಲಕವನ್ನು ಅನ್ವಯಿಸಿ. ನಂತರ ರಾಖಿ ಅಂದರೆ ರಕ್ಷಣಾ ಸೂತ್ರವನ್ನು ಕಟ್ಟಿ ಆರತಿ ಮಾಡಿ ಸಿಹಿ ತಿಂಡಿಯನ್ನು ತಿನ್ನಿಸಿ.

ರಾಖಿ ಕಟ್ಟುವಾಗ ಸಹೋದರ ಸಹೋದರಿ ತಮ್ಮ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ನಂತರ ಉಡುಗೊರೆಯನ್ನು ನೀಡಬೇಕು.

ರಾಕಿ ಕಟ್ಟುವಾಗ ಪಠಿಸಬೇಕಾದ ಮಂತ್ರ

ಯೇನ ಬದ್ಧೋ ಬಲೀ ರಾಜಾ ದಾನವೇಂದ್ರೋ ಮಹಾಬಲಃ

ತೇನ ತ್ವಾಂ ಅನುಬಧ್ನಾಮಿ, ರಕ್ಷೇ ಮಾಚಲಮಾಚಲ

ಜನೇನ ವಿಧಿನಾ ಯಸ್ತು ರಕ್ಷಾ ಬಂಧನಮಾಚರೇತ್

ಸ ಸರ್ವದೋಷ ರಹಿತ ಸುಖಿ ಸಂವತ್ಸರೇ ಭವೇತ್

ವೈದಿಕ ರಾಖಿ

ವೈದಿಕ ರಾಖಿಯನ್ನು ಕಟ್ಟುವುದು ಬಹಳ ಮಹತ್ವದ್ದಾಗಿದೆ. ಶಾಸ್ತ್ರಗಳ ಪ್ರಕಾರ ವೈದಿಕ ರಾಖಿಯನ್ನು ತಯಾರಿಸಲು ಮುಖ್ಯವಾಗಿ ಐದು ವಸ್ತುಗಳು ಅವಶ್ಯಕವಾಗಿರುತ್ತವೆ. ಅವುಗಳೆಂದರೆ ದೂರ್ವ ಹುಲ್ಲು, ಅಕ್ಷತೆ, ಕೇಸರಿ, ಚಂದನ ಹಾಗೂ ಸಾಸಿವೆ ಕಾಳುಗಳು ಬೇಕಾಗುತ್ತವೆ. ಇವುಗಳನ್ನು ಒಂದು ರೇಷ್ಮೆ ಬಟ್ಟೆಯಲ್ಲಿ ಕಟ್ಟಿ ಅಥವಾ ನಿಮ್ಮ ಇಷ್ಟಕ್ಕೆ ಅನುಗುಣವಾಗಿ ಹೊಲಿಯಿರಿ. ನಂತರ ಅದನ್ನು ಕಲವಾ ದಾರದಲ್ಲಿ ಸೂತ್ರ ಮಾಡಿಕೊಳ್ಳಿ. ಈ ರೀತಿಯಾಗಿ ತಯಾರು ಮಾಡುವ ರಾಖಿಯನ್ನು ವೈದಿಕ ರಾಖಿ ಎಂದು ಶಾಸ್ತ್ರದಲ್ಲಿ ಗುರುತಿಸಲಾಗುತ್ತದೆ. ನಿಮ್ಮ ಸಾಂಪ್ರದಾಯದ ಪ್ರಕಾರ ಹಬ್ಬವನ್ನು ಆಚರಿಸಿದರೇ ಒಳಿತುಂಟಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.