ADVERTISEMENT

ವಿಜಯದಶಮಿ ಯಾಕೆ ಆಚರಿಸಲಾಗುತ್ತದೆ? ಇಲ್ಲಿದೆ ಪುರಾಣಾಗಳಲ್ಲಿನ ಮಹತ್ವದ ಮಾಹಿತಿ

ಎಲ್.ವಿವೇಕಾನಂದ ಆಚಾರ್ಯ
Published 1 ಅಕ್ಟೋಬರ್ 2025, 1:39 IST
Last Updated 1 ಅಕ್ಟೋಬರ್ 2025, 1:39 IST
   

ಅಸುರರು ಹಾಗೂ ದುಷ್ಟ ಶಕ್ತಿಗಳ ಮೇಲೆ ದೇವತೆಗಳು ವಿಜಯ ಸಾಧಿಸಿದ ದಿನವೇ ವಿಜಯದಶಮಿ. ಗಡಿಯನ್ನು ಉಲ್ಲಂಘನೆ ಮಾಡಿ ಶತ್ರುಗಳ ರಾಜ್ಯವನ್ನು ಪ್ರವೇಶಿಸಿ ವಿಜಯವನ್ನು ಸಾಧಿಸುವ ದಿನವನ್ನು ವಿಜಯದಶಮಿ ಎಂದು ಜ್ಯೋತಿಷ ಹೇಳುತ್ತದೆ. 

ವಿಜಯ ದಶಮಿಯ ಪೌರಾಣಿಕ ಹಿನ್ನೆಲೆ ಏನು?

ದಸರಾ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ರಾಮಲೀಲೆ. ಅಯೋಧ್ಯೆಯಲ್ಲಿ ವಿಜಯ ದಿವಸ ಎಂದು ಆಚರಣೆ ಮಾಡಲಾಗುತ್ತದೆ. ಪ್ರಜೆಗಳು ಹಾಗೂ ದೇವತೆಗಳನ್ನು ಹಿಂಸೆ ಮಾಡುತ್ತಿದ್ದ ಮಹಿಷಾಸುರನನ್ನು ದುರ್ಗಿಯ 9 ಅವತಾರಗಳಲ್ಲಿ 9 ದಿನಗಳ ಕಾಲ ಯುದ್ಧ ಮಾಡಿ 10ನೇ ದಿನದಂದು ಮಹಿಷಾಸುರನನ್ನು ಚಾಮುಂಡಿಯ ರೂಪದಲ್ಲಿ ವಧಿಸುತ್ತಾಳೆ ಎಂದು ಪುರಾಣ ಕಥೆಗಳು ಹೇಳುತ್ತವೆ. 

ADVERTISEMENT

ರಾಮಾಯಣದ ಪ್ರಕಾರ ರಾಮ ರಾವಣನ ಜೊತೆ ಯುದ್ಧ ಮಾಡಿ ರಾವಣನನ್ನು ಕೊಂದು ಸೀತೆಯನ್ನು ಮರಳಿ ತರುತ್ತಾನೆ ಆ ದಿನವೇ ವಿಜಯದಶಮಿ ಎಂದು ಹೇಳಲಾಗುತ್ತದೆ.

ಮಹಾಭಾರತ ಕಥೆಯ ಪ್ರಕಾರ ವನವಾಸ ಮುಗಿಸಿದಂತಹ ಪಾಂಡವರು ಅಜ್ಞಾತ ವಾಸಕ್ಕೆ ಹೋಗುವ ಮೊದಲು ಬನ್ನಿ ಮರಕ್ಕೆ ತಮ್ಮ ಆಯುಧಗಳನ್ನು ಕಟ್ಟಿ ಇಟ್ಟಿರುತ್ತಾರೆ. ಅಜ್ಞಾತವಾಸ ಮುಗಿಸಿಕೊಂಡ ಬಂದ ನಂತರ ಆಯುಧಗಳನ್ನು ಬನ್ನಿ ಮರದಿಂದ ಮರಳಿ ಪಡೆಯುತ್ತಾರೆ. ಅವುಗಳನ್ನು ತೊಳೆದು ಪೂಜಿಸಿ ಕುರುಕ್ಷೇತ್ರ ಯುದ್ಧಕ್ಕೆ ಸನ್ನದರಾಗುತ್ತಾರೆ. ಆದ್ದರಿಂದ ವಿಜಯ ದಶಮಿ ತಿಥಿ ಎಂದು ಬನ್ನಿ ಮರವನ್ನು ಪೂಜಿಸುವ ಸಾಂಪ್ರದಾಯವಿದೆ. 

ಮೈಸೂರನ್ನು ಮೊದಲಿಗೆ ಮಹಿಷೂರು ಎಂದು ಕರೆಯಲಾಗುತ್ತಿತ್ತು. ರಾಕ್ಷಸನಾದ ಮಹಿಷಾಸುರನನ್ನು ಚಾಮುಂಡಿಯು ಸಂಹಾರ ಮಾಡಿದಳು ಎಂದು ಹೇಳಲಾಗುತ್ತದೆ. ಅಂದಿನಿಂದ ಈ ಭಾಗಕ್ಕೆ ಮೈಸೂರು ಎಂದು ಮರು ನಾಮಕರಣವಾಯಿತು.

ದಸರಾ ಹಬ್ಬದ ಸಮಯದಲ್ಲಿ ಮೈಸೂರು ಸಂಪೂರ್ಣ ಸ್ವರ್ಗದಂತೆ ಗೋಚರಿಸುತ್ತದೆ. ಮೈಸೂರು ದಸರಾದ ಪ್ರಮುಖ ಆಕರ್ಷಣೆ ಅಂದರೆ ಅಂಬಾರಿಯ ಮೇಲೆ ಚಾಮುಂಡೇಶ್ವರಿಯನ್ನು ಕೂರಿಸಿ ಮೈಸೂರಿನ ರಾಜಬೀದಿಗಳಲ್ಲಿ ಜಂಬೂ ಸವಾರಿ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.