ADVERTISEMENT

ವಾರ ಭವಿಷ್ಯ | 29-8-2021ರಿಂದ 4-9-2021ರವರೆಗೆ

ವಾರ ಭವಿಷ್ಯ
Published 28 ಆಗಸ್ಟ್ 2021, 19:30 IST
Last Updated 28 ಆಗಸ್ಟ್ 2021, 19:30 IST
   

ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1)

ಸ್ಥಳ ಬದಲಾವಣೆಯ ನಿರೀಕ್ಷೆಯಲ್ಲಿದ್ದ ಕೆಲವು ಸರ್ಕಾರಿ ನೌಕರರಿಗೆ ಸ್ಥಳ ಬದಲಾವಣೆಯ ಯೋಗ ಇರುತ್ತದೆ. ಗೃಹ ನಿರ್ಮಾಣ ಕಾರ್ಯ ಕ್ರಮೇಣ ವೇಗವನ್ನು ಪಡೆಯುತ್ತದೆ. ವಿದೇಶದಲ್ಲಿರುವ ಬಂಧುಗಳಿಂದ ಧನಸಹಾಯ ದೊರೆಯುತ್ತದೆ. ಕೋರ್ಟ್‌-ಕಚೇರಿ ಕೆಲಸಗಳಲ್ಲಿ ವಿಳಂಬ ಆದರೂ ನಿಮ್ಮದೇ ಮುನ್ನಡೆ ಇರುತ್ತದೆ. ಹಿತೈಷಿಗಳಿಂದ ನಿಮಗೆ ಉತ್ತಮ ಸಲಹೆ ದೊರೆಯುತ್ತದೆ. ಕುಟುಂಬದ ಸದಸ್ಯರಿಂದ ನೆರವು ಸಿಗುವ ಸಾಧ್ಯತೆಯಿದೆ. ಪ್ರಯಾಣದಿಂದ ದೇಹಾಲಸ್ಯ ಆಗಬಹುದು. ಹಣಕಾಸು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ನಿರೀಕ್ಷಿತ ಲಾಭ ಇಲ್ಲದಿದ್ದರೂ ನಷ್ಟವೇನಿಲ್ಲ. ಹಣಕಾಸಿನ ಪರಿಸ್ಥಿತಿಯು ಅಗತ್ಯಕ್ಕೆ ತಕ್ಕಂತೆ ಇರುತ್ತದೆ.

ವೃಷಭರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ1 2)

ADVERTISEMENT

ರಾಸಾಯನಿಕ ವಸ್ತುಗಳನ್ನು ತಯಾರಿಸಿ ರಫ್ತು ಮಾಡುವವರಿಗೆ ವ್ಯವಹಾರ ವಿಸ್ತರಣೆಯ ಜೊತೆ ಲಾಭವು ಇರುತ್ತದೆ. ಗೃಹ ನಿರ್ಮಾಣ ಕೆಲಸಗಳು ಶೀಘ್ರಗತಿಯಲ್ಲಿ ನಡೆಯುತ್ತವೆ. ಉದ್ದಿಮೆಯನ್ನು ನಡೆಸುವವರು ಕೆಲಸಗಾರರ ಮೇಲೆ ವಿನಾ ಕಾರಣಕ್ಕೆ ಕೋಪಗೊಂಡಲ್ಲಿ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು, ಎಚ್ಚರವಾಗಿರಿ. ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಹಾಗೂ ಅದರ ಬಗ್ಗೆ ತಿಳಿಯಲು ಉತ್ಸುಕರಾಗುವಿರಿ. ಶ್ರಮಕ್ಕೆ ತಕ್ಕಫಲ ಒದಗಿಬರಲಿದೆ. ಕುಟುಂಬದಲ್ಲಿ ಹೊಂದಾಣಿಕೆಯ ಸಮಸ್ಯೆ ತಲೆದೋರಬಹುದು, ಇದನ್ನು ಸಮಾಧಾನದಿಂದ ಎದುರಿಸುವುದು ಉತ್ತಮ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಹಾಗಾಗಿ ಖರ್ಚಿಗೆ ಕಡಿವಾಣ ಹಾಕಿರಿ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಅನಿರೀಕ್ಷಿತ ಮೂಲದಿಂದ ಆದಾಯ ಹರಿದು ಬರಲಿದೆ. ವಾಹನ ದುರಸ್ತಿ ಮಾಡುವವರಿಗೆ ಹೆಚ್ಚು ಕೆಲಸ ದೊರೆತು ಆದಾಯವೂ ಹೆಚ್ಚುತ್ತದೆ. ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವಹಿಸಿರಿ. ವ್ಯಾಪಾರ ವಿಸ್ತರಣೆಗೆ ಸೂಕ್ತವಾದ ಮಾಹಿತಿ ದೊರೆಯುತ್ತದೆ. ಸರ್ಕಾರಿ ಸಂಸ್ಥೆಗಳಿಗೆ ವಸ್ತುಗಳನ್ನು ಪೂರೈಕೆ ಮಾಡಿದವರಿಗೆ ಈಗ ಹಂತ ಹಂತವಾಗಿ ಹಣ ಬಿಡುಗಡೆಯಾಗುತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಮಂದಗತಿಯ ವ್ಯವಹಾರ ಇರುತ್ತದೆ. ಸ್ಥಿರಾಸ್ತಿ ಕೊಳ್ಳಲು ಬೇಕಾದ ಹಣ ಹೊಂದಿಸಲು ಕ್ರಮ ತೆಗೆದುಕೊಳ್ಳುವಿರಿ. ತಂದೆ ಅಥವಾ ಹಿರಿಯರಿಂದ ವ್ಯವಹಾರದ ಬಗ್ಗೆ ಸೂಕ್ತ ಸಲಹೆ ಸಿಗುತ್ತದೆ. ಇದನ್ನು ಸರಿಯಾಗಿ ಅನುಷ್ಠಾನಗೊಳಿಸಿರಿ.

ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)

ಕೈಗೊಂಡ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಹಿರಿಯರ ಪ್ರಶಂಸೆಗೆ ಪಾತ್ರರಾಗುವಿರಿ. ತಾಮ್ರದ ವಸ್ತುಗಳನ್ನು ತಯಾರಿಸುವ ಕುಲುಮೆಗಾರರಿಗೆ ಅನಿರೀಕ್ಷಿತ ವ್ಯವಹಾರದ ಲಾಭವಿದೆ. ಕಲಾವಿದರಿಗೆ ಅವರ ಸಾಮರ್ಥ್ಯವನ್ನು ತೋರಿಸಲು ಅವಕಾಶವೊಂದು ಒದಗಿಬರುತ್ತದೆ. ಕುಟುಂಬದ ಜಟಿಲ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿಕೊಳ್ಳುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇದ್ದೇ ಇರುತ್ತದೆ. ಸಹಕಾರ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರಿಗೆ ಜನರಿಂದ ಉತ್ತಮ ಸಹಕಾರ ದೊರೆಯುತ್ತದೆ. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸುವುದು ಒಳ್ಳೆಯದು.

ಸಿಂಹ ರಾಶಿ ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಬೆಳೆದ ಫಸಲಿಗೆ ಉತ್ತಮ ಬೆಲೆ ದೊರೆತು ಕೃಷಿಕರಿಗೆ ಸಂತಸ ಆಗುತ್ತದೆ. ಕೃಷಿ ಕೆಲಸಗಳಲ್ಲಿ ಹೆಚ್ಚಿನ ಉತ್ಸಾಹವನ್ನು ತೋರುವಿರಿ. ಜ್ಞಾನಾರ್ಜನೆಗಾಗಿ ದೂರದೂರಿಗೆ ಹೋಗಬೇಕಾದೀತು. ಜ್ಞಾನದ ಜೊತೆ ಧನಾರ್ಜನೆಯೂ ಆಗುವ ಯೋಗವಿದೆ. ಕ್ರೀಡಾಪಟುಗಳಿಗೆ ಯಶಸ್ಸಿನ ಅಲೆಯ ಮೇಲೇರುವ ಅವಕಾಶಗಳಿವೆ. ರಾಜಕೀಯದಲ್ಲಿರುವವರಿಗೆ ಸೂಕ್ತ ಸ್ಥಾನಮಾನ ದೊರೆಯುವ ಸಾಧ್ಯತೆಗಳು ಇದೆ. ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುತ್ತದೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಪಾಲ್ಗೊಳ್ಳಲು ನಿಮಗೆ ಒಂದು ಅವಕಾಶ ದೊರೆಯುತ್ತದೆ. ತಾಯಿಯಿಂದ ಸೂಕ್ತ ಸಹಾಯವನ್ನು ನಿರೀಕ್ಷಿಸಬಹುದು. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಅಭಿವೃದ್ಧಿ ಇದೆ.

ಕನ್ಯಾ ರಾಶಿ ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಗುತ್ತಿಗೆ ಕಾಮಗಾರಿಯನ್ನು ನಡೆಸುತ್ತಿರುವವರಿಗೆ ಹೊಸ ಗುತ್ತಿಗೆಗಳು ದೊರೆತು ಆನಂದವಾಗುತ್ತದೆ. ಕೆಲವೊಂದು ಆಸೆ ಆಕಾಂಕ್ಷೆಗಳು ಈಡೇರದೆ ಮನಸ್ಸಿಗೆ ಬೇಸರವಾಗುತ್ತದೆ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆಯನ್ನು ಕಂಡರೂ ಅವರ ನಡವಳಿಕೆ ನಿಮಗೆ ಬೇಸರ ತರುತ್ತದೆ. ರೇಷ್ಮೆ ಬಟ್ಟೆಯ ನೇಕಾರರಿಗೆ ಹೊಸ ನೇಯ್ಗೆಯ ಆದೇಶಗಳು ದೊರೆತು ಮುಂಗಡ ಹಣವೂ ದೊರೆಯುತ್ತದೆ. ಸರ್ಕಾರಿ ಕೆಲಸಗಳಿಗಾಗಿ ಹಣ ಖರ್ಚಾದರೂ ನಿಮಗೆ ಕೆಲಸಗಳು ಆಗುತ್ತವೆ. ಭೂಮಿ ವ್ಯವಹಾರವನ್ನು ಮಾಡುತ್ತಿರುವವರಿಗೆ ಯಶಸ್ಸು ದೊರಕಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವೈಯಕ್ತಿಕ ಆರೋಗ್ಯದ ಬಗ್ಗೆ ನಿಗಾ ಇರಲಿ.

ತುಲಾ ರಾಶಿ ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಜಾಹೀರಾತು ಕಂಪನಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಕೆಲವು ಉದ್ದಿಮೆದಾರರು ಜಾಹೀರಾತಿನ ಮೂಲಕ ತಮ್ಮ ವಹಿವಾಟನ್ನು ಹೆಚ್ಚಿಸಿಕೊಳ್ಳುವರು. ಶುಭಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳಿವೆ. ಆದಾಯವನ್ನು ಹೆಚ್ಚಿಸಿಕೊಳ್ಳಲು ಮಾರ್ಗೋಪಾಯಗಳಿಗಾಗಿ ಚಿಂತನೆ ಮಾಡುವಿರಿ. ಕೆಲವರಿಗೆ ವಾಹನ ಖರೀದಿ ಮಾಡುವ ಆಲೋಚನೆ ಇರುತ್ತದೆ. ಅವಿವಾಹಿತರಿಗೆ ಸಂಬಂಧ ಒದಗುವ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ. ಮಕ್ಕಳಿಂದ ನಿಮಗೆ ಗೌರವ ದೊರೆಯುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಅಭಿವೃದ್ಧಿ ಇರುತ್ತದೆ. ಸ್ವಂತ ಆರೋಗ್ಯದ ಕಡೆ ಹೆಚ್ಚಿನ ಗಮನ ಇರಲಿ. ವ್ಯವಹಾರಗಳಲ್ಲಿ ದೊಡ್ಡಮಟ್ಟದ ಹೂಡಿಕೆ ಖಂಡಿತ ಬೇಡ.

ವೃಶ್ಚಿಕ ರಾಶಿ ( ವಿಶಾಖಾ 4 ಅನುರಾಧ ಜೇಷ್ಠ)

ರಫ್ತು ಮಾರಾಟಗಾರರಿಗೆ ಉತ್ತಮ ವ್ಯವಹಾರ ನಡೆಯುವುದರಿಂದ ಬೇಡಿಕೆ ಹೆಚ್ಚಾಗಿ ಆದಾಯ ಹೆಚ್ಚುವುದು. ಇರುವ ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವ ಯೋಗವಿದೆ. ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಲು ಸ್ನೇಹಿತರ ಸಹಾಯ ಪಡೆಯುವಿರಿ. ಆರ್ಥಿಕತೆಯು ಸ್ಥಿರತೆಯತ್ತ ಸಾಗುತ್ತದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಸ್ವಲ್ಪ ಅಲೆದಾಟವಿರುತ್ತದೆ. ಸಿದ್ಧಪಡಿಸಿದ ವಸ್ತ್ರಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವಿಸ್ತರಣೆಯಾಗುತ್ತದೆ. ಅದಿರು ಮಾರಾಟಗಾರರಿಗೆ ಬೇಡಿಕೆ ಹೆಚ್ಚುತ್ತದೆ. ಶೀತಬಾಧೆ ಇರುವವರು ಹೆಚ್ಚಿನ ನಿಗಾವಹಿಸಿರಿ.

ಧನಸ್ಸು ರಾಶಿ ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ಕೆಲವು ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸಹಾಯಧನ ಬರುವ ಸಾಧ್ಯತೆ ಇದೆ. ಹೊಸ ಕೆಲಸಗಳಿಗೆ ಪ್ರಯತ್ನ ಮಾಡುವವರು ತಮ್ಮ ಸ್ನೇಹಿತರ ವಲಯದಲ್ಲಿ ವಿಚಾರಿಸುವುದು ಒಳ್ಳೆಯದು. ಯಂತ್ರೋಪಕರಣಗಳ ಬಿಡಿಭಾಗಗಳನ್ನು ತಯಾರಿಸಿ ಮಾರುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇದ್ದೇ ಇರುತ್ತದೆ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣಬಹುದು. ವೈದ್ಯಕೀಯ ರಂಗದಲ್ಲಿ ಕೆಲಸ ಮಾಡುವವರಿಗೆ ಹೆಸರಿನ ಜೊತೆಗೆ ಆದಾಯವೂ ಹೆಚ್ಚುತ್ತದೆ. ಧಾರ್ಮಿಕ ಕೆಲಸ ಮಾಡುವವರಿಗೆ ಹೆಚ್ಚಿನ ದೇಣಿಗೆ ಸಿಗುತ್ತದೆ. ಖರ್ಚನ್ನು ಮಿತವಾಗಿ ಇಡುವುದು ಬಹಳ ಒಳ್ಳೆಯದು.

ಮಕರ ರಾಶಿ ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಔಷಧಿ ತಯಾರಿಕಾ ಕಂಪನಿಗಳಿಗೆ ವಿಶೇಷ ಬೇಡಿಕೆಯಿಂದಾಗಿ ಉತ್ತಮ ಲಾಭ ಬರುತ್ತದೆ. ಸ್ವಂತ ಉದ್ದಿಮೆಯನ್ನು ನಡೆಸುತ್ತಿರುವವರಿಗೆ ಕಾಲಗತಿಯಲ್ಲಿ ಚೇತರಿಕೆಯನ್ನು ಕಾಣಬಹುದು. ಹಣಕಾಸಿನ ವ್ಯವಹಾರದಲ್ಲಿ ಬರದೆ ನಿಂತಿದ್ದ ಹಣ ಈಗ ಬರಲು ಆರಂಭಿಸುತ್ತದೆ. ಮನೆ ನಿರ್ಮಾಣ ಮಾಡುವವರ ವ್ಯವಹಾರದಲ್ಲಿ ಚೇತರಿಕೆಯನ್ನು ಕಾಣಬಹುದು. ಆತ್ಮವಿಶ್ವಾಸದಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸನ್ನು ಕಾಣಬಹುದು. ಬರವಣಿಗೆಯಲ್ಲಿ ನಿರತರಾದವರಿಗೆ ಸಾಮಾಜಿಕ ಪ್ರೋತ್ಸಾಹ ದೊರೆಯುತ್ತದೆ. ಶೃಂಗಾರ ಸಾಮಗ್ರಿಗಳ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸುತ್ತದೆ. ಸ್ಥಿರಾಸ್ತಿಯ ಖರೀದಿಯಲ್ಲಿ ಪ್ರಗತಿಯನ್ನು ಕಾಣಬಹುದು. ಸರ್ಕಾರಿ ಕೆಲಸ ಮತ್ತು ಸರ್ಕಾರಿ ಮಟ್ಟದ ಕೆಲಸಗಳಲ್ಲಿ ನಿಧಾನಗತಿ ಇರುತ್ತದೆ.

ಕುಂಭ ರಾಶಿ ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಉದ್ದಿಮೆಯನ್ನು ವಿಸ್ತರಿಸಲು ಸಾಕಷ್ಟು ತಯಾರಿ ಮಾಡುವಿರಿ. ನಿಮ್ಮ ಕಾರ್ಯಕ್ಷೇತ್ರವನ್ನು ವಿದೇಶಗಳಲ್ಲಿ ವಿಸ್ತರಿಸಲು ಅನುಮತಿ ದೊರೆಯುತ್ತದೆ. ರೈತಾಪಿ ವರ್ಗದವರಿಗೆ ಸಹಾಯಧನ ದೊರೆಯುವ ಸಾಧ್ಯತೆಗಳಿವೆ. ವಾಹನ ಖರೀದಿಯ ಸಾಧ್ಯತೆ ಇದೆ. ಸಮಯವರಿತು ಕೆಲಸ ಕಾರ್ಯಗಳನ್ನು ಮಾಡುವುದರಿಂದ ವೃತ್ತಿಯಲ್ಲಿ ಪ್ರಗತಿ ಇರುತ್ತದೆ. ಹಣದ ಹರಿವು ಸಾಮಾನ್ಯವಾಗಿರುತ್ತದೆ. ಹೆಂಗಸರು ಮಾಡಿದ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭವಿರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ಶೀತಬಾಧೆ ಇರುವವರು ಅಗತ್ಯ ಎಚ್ಚರಿಕೆ ತೆಗೆದುಕೊಳ್ಳಬೇಕು. ಆಸ್ತಿ ವಿವಾದಗಳು ತಹಬಂದಿಗೆ ಬಂದು ಸಂಬಂಧ ಸುಧಾರಿಸುತ್ತದೆ.

ಮೀನ ರಾಶಿ ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಪ್ರಭಾವಿ ವ್ಯಕ್ತಿಗಳ ಜೊತೆ ಓಡಾಡಿಕೊಂಡು ನಿಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುವಿರಿ. ಅನಿರೀಕ್ಷಿತವಾಗಿ ಕೆಲವು ಅಧಿಕಾರಿಗಳಿಗೆ ಉನ್ನತ ಹುದ್ದೆ ಸಿಗುವ ಸಾಧ್ಯತೆ ಇದೆ. ಮಕ್ಕಳಿಗಾಗಿ ಹಣ ಹೊಂದಿಸಬೇಕಾದ ಅನಿವಾರ್ಯ ಎದುರಾಗಬಹುದು. ಧನದಾಯದ ಮೂಲಗಳನ್ನು ಹುಡುಕಿ ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಸರ್ಕಾರದ ಕಡೆಯಿಂದ ಬರಬೇಕಿದ್ದ ಸಹಾಯಧನ ಸಲೀಸಾಗಿ ಬರುತ್ತದೆ. ವಾಹನ, ಸರಕು ಸಾಗಣೆ ವಹಿವಾಟಿನಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು ಮತ್ತು ಆದಾಯ ಹೆಚ್ಚಿಸಿಕೊಳ್ಳಬಹುದು. ತಾಯಿಯ ಕಡೆಯಿಂದ ಧನಸಹಾಯ ಒದಗಿ ಬರುತ್ತದೆ. ಕಣ್ಣಿನ ತೊಂದರೆ ಇರುವವರು ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.