ADVERTISEMENT

ಅಲ್ಪಸಂಖ್ಯಾತ ಭಾಷೆಯಲ್ಲಿತುಳುವಿಗೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಪುತ್ತೂರು: `ದೇಶದಲ್ಲಿ 100 ಅಲ್ಪಸಂಖ್ಯಾತ ಭಾಷೆಗಳಿದ್ದು, ಈ ಪೈಕಿ ಅತೀ ಹೆಚ್ಚು ಜನ ಸಮುದಾಯವನ್ನು ಒಳಗೊಂಡ ತುಳು ಭಾಷೆಯೇ ಅಗ್ರಸ್ಥಾನದಲ್ಲಿದೆ~ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಾಲ್ತಾಡಿ ರಾಮಕೃಷ್ಣ ಆಚಾರ್ ಹೇಳಿದರು.

ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆ ವಠಾರದಲ್ಲಿ ಅಕ್ಟೋಬರ್ 7-8ರಂದು ನಡೆಯಲಿರುವ ಅಖಿಲ ಭಾರತ ತುಳು ಸಮ್ಮೇಳನ ಪೂರ್ವತಯಾರಿ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಪುತ್ತೂರಿನ ಲಯನ್ಸ್ ಸೇವಾ ಸದನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಕುಲಪತಿ ವಿವೇಕ ರೈ ಪ್ರಧಾನ ಭಾಷಣ ಮಾಡುವರು. ಸಚಿವ ವಿ.ಎಸ್.ಆಚಾರ್ಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು ಎಂದು ಅವರು ತಿಳಿಸಿದರು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಕರ್ನಾಟಕ ಸಂಘ ಅಧ್ಯಕ್ಷರಾದ ಸಾಹಿತಿ ಬಿ.ಪುರಂದರ ಭಟ್ ಮತ್ತು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ಬಿ.ಜೆ.ಸುವರ್ಣ ಪ್ರಚಾರದ ಬ್ಯಾನರ್ ಬಿಡುಗಡೆ ಮಾಡಿದರು.

ಅಕಾಡೆಮಿ ಸದಸ್ಯರಾದ ಆಶೋಕ್ ಶೆಟ್ಟಿ ಸರಪ್ಪಾಡಿ, ಉದಯ ಧರ್ಮಸ್ಥಳ, ಪ್ರೇಮಲತಾ ರಾವ್, ಸ್ವಾಗತ ಸಮಿತಿ ಉಪಾಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಹೆಬ್ಬಾರಬೈಲು ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.