ಸಕಲೇಶಪುರ: ಕಾಡಾನೆ ದಾಳಿಯಿಂದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ತಾಲ್ಲೂಕಿನ ಶಿವನಹಳ್ಳಿ ಕೂಡಿಗೆ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಸೋಮವಾರಪೇಟೆ ತಾಲ್ಲೂಕಿನ ಶಿರಂಗಾಲ ಗ್ರಾಮದ ನಿವಾಸಿ ಅವಿನಾಶ್ (24) ಮೃತಪಟ್ಟ ದುರ್ದೈವಿ.
ಬುಧವಾರ ರಾತ್ರಿ ಕಾರ್ಯಕ್ರಮವೊಂದಕ್ಕೆ ಬ್ಯಾಂಡ್‌ಸೆಟ್‌ನವರನ್ನು ಐಗೂರು ಗ್ರಾಮದಲ್ಲಿ ಬಿಟ್ಟು ಆಟೋದಲ್ಲಿ ಮನೆಗೆ ಮರಳುತ್ತಿದ್ದಾಗ ಡೀಸೆಲ್ ಖಾಲಿ ಆದ ಕಾರಣ ಮಾರ್ಗದ ಮಧ್ಯದಲ್ಲಿಯೇ ಆಟೋದಲ್ಲಿ ಮಲಗಿ ರಾತ್ರಿ ಕಳೆದಿದ್ದ ಎನ್ನಲಾಗಿದೆ. ಡೀಸೆಲ್ ಪಡೆಯುವ ಸಲುವಾಗಿ ಮುಂಜಾನೆ 6.45ರ ಸುಮಾರಿಗೆ ಶಿವನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದಾಗ ಒಂಟಿ ಸಲಗ ದಾಳಿ ಮಾಡಿದೆ. 200 ಮೀಟರ್‌ಗೂ ಹೆಚ್ಚು ದೂರದವರೆಗೆ ಎಳೆದುಕೊಂಡು ಹೋಗಿ ಸೊಂಡಿಲಿನಿಂದ ಬಡಿದು ಕೊಂದು ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.