ಹುಕ್ಕೇರಿ: ತಾಲ್ಲೂಕಿನ ಶಿಂಧಿಹಟ್ಟಿಯ ಲಕ್ಷ್ಮೀ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನೀಡುವುದನ್ನು ಜನರು ನಿಲ್ಲಿಸಿ ಮೂರು ಕೋಣಗಳನ್ನು ರಕ್ಷಣೆ ಮಾಡಿದ ಘಟನೆ ಬುಧವಾರ ನಡೆದಿದೆ.
ದೇವರ ಹೆಸರಿನಲ್ಲಿ ಬಿಟ್ಟಿದ್ದ ಮೂರು ಕೋಣಗಳನ್ನು ದೇವಿಗೆ ಬಲಿ ಕೊಡುವುದನ್ನು ನಿಲ್ಲಿಸಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಗೋವಂಶ ರಕ್ಷಾ ದಳಕ್ಕೆ ಜನರು ಒಪ್ಪಿಸಿದರು.
ಶಿಂಧಿಹಟ್ಟಿ-ಹೊಸಪೇಟೆ ಗ್ರಾಮಗಳಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವತೆಯರಾದ ಲಕ್ಷ್ಮೀ ದೇವಿ, ಬಂಡೆಮ್ಮ ದೇವಿ ಹಾಗೂ ಕಮಲಮ್ಮ ದೇವತೆಗಳಿಗೆ ಐದು ದಿನಗಳವರೆಗೆ ಜಾತ್ರೆ ನಡೆಯುತ್ತದೆ. ಜಾತ್ರೆ ಅಂಗವಾಗಿ ಕೋಣ, ಕುರಿ-ಆಡು, ಮತ್ತಿತರ ಪ್ರಾಣಿಗಳನ್ನು ಬಲಿಕೊಡುವ ಸಂಪ್ರದಾಯ ಇತ್ತು.
ಬೆಂಗಳೂರಿನಿಂದ ಆಗಮಿಸಿದ್ದ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಗೋವಂಶ ರಕ್ಷಾ ದಳದ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು ಮಂಗಳವಾರವೇ ಗ್ರಾಮದಲ್ಲಿ ಸಂಚರಿಸಿ ಪ್ರಾಣಿ ದಯಾ ಸಂದೇಶ ಜಾಥಾ ನಡೆಸಿದ್ದರು.
ಜಾಥಾದಿಂದ
ಮನ ಪರಿವರ್ತನೆಗೊಂಡು ಗ್ರಾಮಸ್ಥರು ಸ್ವಇಚ್ಛೆಯಿಂದ ಮೂರು ಕೋಣಗಳನ್ನು ಸ್ವಾಮೀಜಿ ಅವರಿಗೆ ಒಪ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.