ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಿಂದ ಕಳವು ಮಾಡಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿ ನಿಲ್ಲಿಸಲು ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದ ಘಟನೆ ಮಂಗಳವಾರ ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಾರವಾರ ಬೈಪಾಸ್ ಬಳಿ ನಡೆದಿದೆ.
ಘಟನೆಯಲ್ಲಿ ಲಾರಿ ಅಪಹರಣದ ಆರೋಪಿ ಓರಿಸ್ಸಾದ ಸಂಬಲಪುರ ತಾಲ್ಲೂಕು ಇಂಚಕೆಲಾ ನಿವಾಸಿ ಮನೋಜ್ ಪವಾರ್ (23) ಗುಂಡೇಟಿನಿಂದ ಗಾಯಗೊಂಡಿದ್ದು, ಕಿಮ್ಸಗೆ ದಾಖಲು ಮಾಡಲಾಗಿದೆ.
ಧಾರವಾಡ ನಗರ ಠಾಣೆ ಪೊಲೀಸ್ ಕಾನ್‌ಸ್ಟೆಬಲ್ ಬಸವರಾಜ ಕಡಕೋಳ ಅವರು ಲಾರಿ ತಡೆಯಲು ಮೇಲೆ ಹತ್ತಿದಾಗ, ಮನೋಜನು ಕೆಳಗೆ ತಳ್ಳಿದ್ದರಿಂದ ಬಸವರಾಜ ಅವರ ಎಂಬುವವರ ಕೈ ಮುರಿದಿದೆ. ಇವರನ್ನು ಕಿಮ್ಸಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.