ADVERTISEMENT

ಬ್ಯಾಟರಾಯನಪುರ: ₹2 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಮೇ 2022, 4:00 IST
Last Updated 3 ಮೇ 2022, 4:00 IST
ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೃಷ್ಣಬೈರೇಗೌಡ ಚಾಲನೆ ನೀಡಿದರು. ಕಾಂಗ್ರೆಸ್ ಮುಖಂಡರಾದ ರಾಜಣ್ಣ, ಟಿ.ವೆಂಕಟರಾಮರೆಡ್ಡಿ, ಎಚ್.ಎ.ಶಿವಕುಮಾರ್ ಇತರರು ಇದ್ದರು
ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೃಷ್ಣಬೈರೇಗೌಡ ಚಾಲನೆ ನೀಡಿದರು. ಕಾಂಗ್ರೆಸ್ ಮುಖಂಡರಾದ ರಾಜಣ್ಣ, ಟಿ.ವೆಂಕಟರಾಮರೆಡ್ಡಿ, ಎಚ್.ಎ.ಶಿವಕುಮಾರ್ ಇತರರು ಇದ್ದರು   

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಭುವನೇಶ್ವರಿನಗರ ಹಾಗೂ ದತ್ತ ಟೌನ್ ಶಿಪ್ (ಕಟ್ಟಿಗೇನಹಳ್ಳಿ) ಬಡಾವಣೆಯಲ್ಲಿ ₹2 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೃಷ್ಣಬೈರೇಗೌಡ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಭುವನೇಶ್ವರಿ ನಗರದಲ್ಲಿ ಈ ಹಿಂದೆ ಅಭಿವೃದ್ಧಿಪಡಿಸಿದ್ದ ರಸ್ತೆಗಳು ಕಾವೇರಿ ನೀರು ಮತ್ತು ಒಳಚರಂಡಿ ಪೈ‍ಪ್‌ಲೈನ್‌ ಅಳವಡಿಕೆ ಹಾಗೂ ದತ್ತ ಟೌನ್ ಶಿಪ್ ಬಡಾವಣೆಯಲ್ಲಿ ಕಾವೇರಿ ನೀರು ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಹಾಳಾಗಿದ್ದವು. ಹೀಗಾಗಿ ಮತ್ತೆ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ರಾಜಣ್ಣ, ಟಿ.ವೆಂಕಟರಾಮರೆಡ್ಡಿ, ಎಚ್.ಎ.ಶಿವಕುಮಾರ್, ಡಿ.ಬಿ.ಸುರೇಶ್ ಗೌಡ, ಡಿ.ಸಿ.ಮುನಿರಾಜು, ಡಿ.ಸಿ.ಮುನಿಸ್ವಾಮಿ, ಸಿ.ನಂಜಪ್ಪ, ಬಿಬಿಎಂಪಿ ಸಹಾಯಕ ಎಂಜಿನಿಯರ್‌ಗಳಾದ ಸುರೇಶ್ ದೇವತಾಚಾರ್, ಮಾಲತೇಶ್ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.