ADVERTISEMENT

ಅಂಬೇಡ್ಕರ್ ಹೆಸರು ಚಿರಸ್ಥಾಯಿ: ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 19:51 IST
Last Updated 4 ಜೂನ್ 2022, 19:51 IST
ಪರಿವರ್ತನಾ ಸಮಾವೇಶದಲ್ಲಿ ಅಂಬೇಡ್ಕರ್ ಪ್ರತಿಮೆ ಮತ್ತು ನಾಲ್ವಡಿ ಕೃಷ್ಣರಾಜ್ ಒಡೆಯರ್ ಭಾವಚಿತ್ರಕ್ಕೆ ಎಂ.ವೆಂಕಟಸ್ವಾಮಿ, ಮಹಾನಾಯಕ ಧಾರಾವಾಹಿಯಲ್ಲಿ ನಟಿಸಿರುವ ಮಾಸ್ಟರ್ ಆಯುಧ್ ಭಾನುಶಾಲಿ, ಬಿ.ಟಿ.ಲಲಿತಾ ನಾಯಕ್, ಸಚಿವ ವಿ.ಸೋಮಣ್ಣ ಅವರು ಪುಷ್ಪ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಬುದ್ಧ, ಬಸವಣ್ಣ, ಅಂಬೇಡ್ಕರ್ ಈ ದೇಶದ ಸಂಪತ್ತು’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ 138ನೇ ಜಯಂತಿ, ಎಂ. ವೆಂಕಟ
ಸ್ವಾಮಿ ಅವರ 68ನೇ ಹುಟ್ಟುಹಬ್ಬದ ಅಂಗವಾಗಿ ಸಮತಾ ಸೈನಿಕ ದಳ ಏರ್ಪಡಿಸಿದ್ದ ಪರಿವರ್ತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್ ಯಾವುದೇ ಸಮುದಾ
ಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರು ಈ ದೇಶಕ್ಕೆ ನೀಡಿರುವ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಸೂರ್ಯ– ಚಂದ್ರ ಇರುವ ತನಕ ಅಂಬೇಡ್ಕರ್ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ’ ಎಂದರು.

ADVERTISEMENT

‘ವೆಂಕಟಸ್ವಾಮಿ ಅವರು ಬಡವರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅವರ ಹೋರಾಟದ ಬದುಕಿನ ಕುರಿತು ‘ಬಡವರ ಸಾಹೇಬ’ ಎಂಬ ಸಿನಿಮಾ ನಿರ್ಮಾಣ ಆಗುತ್ತಿರುವುದು ಸಂತಸದ ವಿಷಯ’ ಎಂದು ಹೇಳಿದರು.

ಇದೇ ವೇಳೆ ಲೇಖಕಿ ಬಿ.ಟಿ.ಲಲಿತಾ
ನಾಯಕ್ ಅವರಿಗೆ ನಾಲ್ವಡಿ ಕೃಷ್ಣರಾಜ
ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.