ADVERTISEMENT

ಜಿ.ಪಂ ಸಭೆಯಲ್ಲಿ ಮಾರ್ದನಿಸಿದ ‘ಲಂಚಾವತಾರ’

ವಿವಿಧ ಇಲಾಖೆಯಲ್ಲಿ ಲಂಚವಿಲ್ಲದೆ ಕೆಲಸವಿಲ್ಲ ಸದಸ್ಯರಿಂದ ಆರೋಪ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 14:28 IST
Last Updated 31 ಜನವರಿ 2019, 14:28 IST
ಬಾಗಲಕೋಟೆಯ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಜಿಲ್ಲಾ ಪಂಚಾಯ್ತಿಯ 9ನೇ ಸಮಾನ್ಯ ಸಭೆಯಲ್ಲಿ ಡಿಡಿಪಿಐ ಅವರ ವಿರುದ್ಧ ಜಿಲ್ಲಾ ಪಂಚಾಯ್ತಿ ಸದಸ್ಯ ಮಹಾಂತೇಶ ಉದಪುಡಿ ಆರೋಪ ಮಾಡಿದರು
ಬಾಗಲಕೋಟೆಯ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಜಿಲ್ಲಾ ಪಂಚಾಯ್ತಿಯ 9ನೇ ಸಮಾನ್ಯ ಸಭೆಯಲ್ಲಿ ಡಿಡಿಪಿಐ ಅವರ ವಿರುದ್ಧ ಜಿಲ್ಲಾ ಪಂಚಾಯ್ತಿ ಸದಸ್ಯ ಮಹಾಂತೇಶ ಉದಪುಡಿ ಆರೋಪ ಮಾಡಿದರು   

ಬಾಗಲಕೋಟೆ: ‘ಜಿಲ್ಲಾ ಪಂಚಾಯ್ತಿಗೆ ಒಳಪಡುವ ವಿವಿಧ ಇಲಾಖೆಗಳಲ್ಲಿ ಲಂಚಾವತಾರ ತಾಂಡವವಾಡುತ್ತಿದ್ದರೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹದ ಅಧಿಕಾರಿ ಗಂಗೂಬಾಯಿ ಮಾನಕರ ಇಂತಹವರ ವಿರುದ್ಧ ಯಾವುದೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದೇ ಆಡಳಿತ ನಡೆಸಲು ವಿಫಲರಾಗಿದ್ದಾರೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ಪಕ್ಷಾತೀತವಾಗಿ ಆರೋಪಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಜಿಲ್ಲಾ ಪಂಚಾಯ್ತಿಯ 9ನೇ ಸಾಮಾನ್ಯ ಸಭೆಯಲ್ಲಿ ಸದಸ್ಯರು ಡಿ.ಡಿ.‍ಪಿ.ಐ ಇಲಾಖೆಯಲ್ಲಿ ಅವ್ಯವಹಾರ ನಡೆದಿದ್ದರೆ ಬಗ್ಗೆ ಗಮನಕ್ಕೆ ತಂದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ವಿಷಯಗಳು ರಾಜ್ಯದಲ್ಲಿ ಚರ್ಚೆಯಾಗುತ್ತಿದ್ದು, ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಮಹಾಂತೇಶ ಉದಪುಡಿ ಮಾತನಾಡಿ, ‘ಜಿಲ್ಲೆಯ ಹಿಪ್ಪರಗಿ ಗ್ರಾಮದಲ್ಲಿನ ಶಾಲೆಯಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಶಾಲೆಯ ನವೀಕರಣಕ್ಕೆ ₹50 ಸಾವಿರ ಲಂಚ ಕೇಳುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಡಿ.ಡಿ.ಪಿ.ಐ ಅವರಿಗೆ ಕೇಳಿದರೂ ಪರಿಶೀಲಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಶೇ 60ರಷ್ಟು ಸೌಲಭ್ಯಗಳಿದ್ದರೂ, ನವೀಕರಣ ಮಾಡಿಕೊಡಬೇಕು ಎಂಬ ನಿಯಮವಿದ್ದರೂ ಲಂಚ ನೀಡದಿದ್ದಕ್ಕಾಗಿನವೀಕರಣ ಮಾಡಿಕೊಡುತ್ತಿಲ್ಲ ಕಾರಣ ಇದರ ವಿರುದ್ಧ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಇದಕ್ಕೆ ಡಿ.ಡಿ.ಪಿ.ಐ ಆರ್.ಕಾಮಾಕ್ಷಿ, ‘ಈ ಶಾಲೆಯ ನವೀಕರಣ ಮಾಡದ ಬಗ್ಗೆ ಹಿಂದಿನ ಜಿಲ್ಲಾ ಪಂಚಾಯ್ತಿಗೆ ಉಪಕಾರ್ಯದರ್ಶಿಗೆ ಮಾಹಿತಿ ನೀಡಲಾಗಿತ್ತು’ ಎಂದಾಗ, ಮಧ್ಯ ಪ್ರವೇಶಿಸಿದ ಅಧ್ಯಕ್ಷೆ ವೀಣಾ, ‘ನೀವು ಪದೇಪದೆ ರಜೆ ಹಾಕುವುದರಿಂದ ಇಂತಹ ಸಮಸ್ಯೆಗಳನ್ನು ಉದ್ಭವವಾಗುತ್ತಿವೆ. ನೀವು ನಿಮ್ಮ ಊರಿನಲ್ಲಿ ಉಳಿದು ಬಿಡಿ, ಇಲ್ಲಿ ಯಾಕೇ ಬರುತ್ತಿರಿ’ ಎಂದು ಕಾಮಾಕ್ಷಿಯವರನ್ನು ಗದರಿಸಿ, ‘ನಿಮ್ಮ ಆಡಳಿತ ವೈಖರಿಯ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ’ ತಿಳಿಸಿದರು.

‘ಎಸ್.ಎಸ್.ಎಲ್.ಸಿ ಪರೀಕ್ಷೆ ಬರುತ್ತಿರುವುದರಿಂದ ರಜೆ ತೆಗೆದುಕೊಳ್ಳಬೇಡಿಅನೇಕ ಬಾರಿ ನಿಮಗೆ ಹೇಳಿದರು. ನೀವು ಮಾತ್ರ ಪದೇಪದೆ ರಜೆ ತೆಗೆದುಕೊಂಡು ಹೋಗುತ್ತಿದ್ದು, ಇದರಿಂದ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶದ ಮೇಲೆ ಪರಿಣಾಮ ಬೀಳುವುದರಿಂದ ನೀವು ಪರೀಕ್ಷೆಯ ಹೊತ್ತಿಗೆ ನಮ್ಮ ಜಿಲ್ಲೆಯಲ್ಲಿ ಇರಬೇಡಿ’ ಎಂದರು.

‘ಮಹಾಂತೇಶ ಅವರು ಹೇಳುತ್ತಿರುವ ಪ್ರಸ್ತಾವಕಳೆದ ನಾಲ್ಕೈದು ವರ್ಷದ ಹಿಂದನದ್ದು. ನನಗೆ ಡಿಡಿಪಿಐ ಕಚೇರಿಯಿಂದ ಬಂದ ನಾಲ್ಕು ಪ್ರಸ್ತಾವಕ್ಕೆಅನುಮತಿ ನೀಡಿದ್ದೇನೆ. ಈ ಪ್ರಸ್ತಾವನನ್ನ ಹತ್ತಿರ ಬಂದಿಲ್ಲ ಅದು ಡಿಡಿಪಿಐ ವರದ್ದು ತಪ್ಪು,ಹಾಗೂ ಕೆಲವೊಂದು ಪ್ರಸ್ತಾವದಲ್ಲಿಕೆಲವೊಂದು ಮಾಹಿತಿಗಳು ತಪ್ಪಿದ್ದ ಕಾರಣ ಅವುಗಳನ್ನು ಸರಿಪಡಿಸಿಕೊಂಡುಬರುವಂತೆ ಹೇಳಲಾಗಿದೆ. ಇನ್ನೂ ಲಂಚದ ಬಗ್ಗೆ ತನಿಖೆ ಮಾಡುವ ಅಧಿಕಾರ ನಮಗಿಲ್ಲ.ಇನ್ನೂ ಅದನ್ನು ಭ್ರಷ್ಟಾಚಾರ ನಿಗ್ರಹದಳದ ಕೆಲಸವಾಗಿದ್ದು, ಇದರ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮನವಿ ಮಾಡಲಾಗುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಸದಸ್ಯರ ಆರೋಪಕ್ಕೆ ಉತ್ತರ ನೀಡಿದರು.

ಸಿಬ್ಬಂದಿಯಿಂದ ಲಂಚಕ್ಕೆ ಕೈ ಒಡ್ಡುತ್ತಿರುವ ಅಧಿಕಾರಿಗಳು

ಆಯುಷ್ಯ ಇಲಾಖೆಯ ಅಧಿಕಾರಿಗಳು ‘ಡಿ’ ಗ್ರೂಪ್‌ನವರ ಗುತ್ತಿಗೆಯನ್ನು ಮುಂದುವರೆಸಲು ಸಿಬ್ಬಂದಿಯಿಂದ ಲಂಚ ಕೇಳುತ್ತಿರುವ ಆಡಿಯೊವನ್ನು ಕೇಳಿಸಿದ ಸದಸ್ಯ ಪುಂಡಲಿಕ ಪಾಲಭಾವಿ, ‘ಇಂತಹ ಅಧಿಕಾರಿಗಳು ಇರುವುದರಿಂದ ಅವರ ಹತ್ತಿರ ದುಡಿಯುವ ಸಿಬ್ಬಂದಿ ಸಣ್ಣ ಸಂಬಳದಲ್ಲಿ ಲಂಚ ಕೊಟ್ಟು ಜೀವನ ನಡೆಸುವುದು ದುಸ್ತರವಾಗಿದೆ. ಆದಷ್ಟು ಬೇಗ ಇದರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಆಯುಷ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಅನಾರೋಗ್ಯದಿಂದ ರಜೆ ಇರುವುದರಿಂದ ತಾವು ಬಂದಿರುವುದಾಗಿ ತಿಳಿಸಿದ ದ್ವಿತೀಯ ದರ್ಜೆ ಅಧಿಕಾರಿಗೆ, ‘ನಿಮ್ಮ ಅಧಿಕಾರಿಯ ಮನೆಗೆ ಆಂಬುಲೆನ್ಸ್‌ ಕಳಿಸಿಕೊಡುತ್ತೇವೆ. ಅಧಿಕಾರಿಯನ್ನು ಕರೆದುಕೊಂಡು ಬಂದು ನಮಗೆ ಉತ್ತರ ಹೇಳಿ’ ಎಂದು ವೀಣಾ ತರಾಟೆ ತೆಗೆದುಕೊಂಡರು.

ಆಯುಷ್ಯ ಇಲಾಖೆಯಲ್ಲಿನ ಅಧಿಕಾರಿಗಳ ವರ್ಗಾವಣೆ ಮಾಡಿಹಿರಿಯ ಅಧಿಕಾರಿಗಳನ್ನು ನೇಮಿಸಿ ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಜರುಗಿಸಲಾಗುತ್ತದೆ ಎಂದು ಸಿಇಒ ಮಾನಕರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.