ADVERTISEMENT

ಸ್ವಾವಲಂಬಿಯಾಗುವ ಶಿಕ್ಷಣ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 5:15 IST
Last Updated 19 ಮಾರ್ಚ್ 2012, 5:15 IST
ಸ್ವಾವಲಂಬಿಯಾಗುವ ಶಿಕ್ಷಣ ನೀಡಲು ಸಲಹೆ
ಸ್ವಾವಲಂಬಿಯಾಗುವ ಶಿಕ್ಷಣ ನೀಡಲು ಸಲಹೆ   

ಇಳಕಲ್: ಶಿಕ್ಷಣ ಪಡೆದವರೆಲ್ಲೂ ನೌಕರಿಗಾಗಿ ಪರಡಾಡುವುದರಿಂದ ನಿರದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಸ್ವಾವಲಂಬಿ ಜೀವನ ಸಾಗಿಸಲು ವೃತ್ತಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು  ಬಾದಾಮಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಜಿ.ಜಿ. ಹಿರೇಮಠ ಹೇಳಿದರು.

ಇಲ್ಲಿಗೆ ಸಮಿಪದ ಜಂಬಲದಿನ್ನಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಎಲ್ಲರಿಗೂ ಸರಕಾರದಿಂದ ಉದ್ಯೋಗ ಒದಗಿಸುವುದು ಕಷ್ಟಸಾಧ್ಯ. ಅದಕ್ಕಾಗಿ ವಿದ್ಯಾರ್ಥಿಗಳಿಗೆ ಸ್ವಾವಲಂಬಿಯಾಗಿ ಜೀವನ ನಡೆಸುವಂಥ ಶಿಕ್ಷಣದ ತರಬೇತಿ ಪಡೆದರೆ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂದರು.

ಸಲಹಾ ಕೇದ್ರದ ಉದ್ಘಾಟನೆ ಮಾಡಿದ ಇಳಕಲ್ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಪಿ. ಗೋಟೂರ ಮಾತನಾಡಿ, ಎಸ್ಸೆಸ್ಸೆಲ್ಸಿ ನಂತರ ಹಲವಾರು ಆಯ್ಕೆಗಳಿ ರುತ್ತವೆ.  ನಿಮ್ಮ ಸಾಮರ್ಥ್ಯಕ್ಕ ನುಗುಣ ವಾಗಿ ಸರಿಯಾದ ಆಯ್ಕೆ ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರಗೌಡ ಚಿನ್ನನಗೌಡ್ರ  ಅಧ್ಯಕ್ಷತೆ ವಹಿಸಿದ್ದರು.
 ಮುಖ್ಯ ಶಿಕ್ಷಕ ಜಿ.ಎಸ್. ಅಡವಿ ಕನಕನಗೌಡ ಗೌಡರ, ಸೋಮನಗೌಡ ಗೌಡರ, ವಿಜಯಕುಮಾರ ಹಾಜರಿ ದ್ದರು. ಎಸ್.ಎ. ನದಾಫ ಸ್ವಾಗತಿಸಿದರು. ಬಿ.ಎಲ್ ಗುರಂ ನಿರೂಪಿಸಿದರು. ಎಸ್.ಪಿ. ಕುಂತೆನ್ನವರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.