ADVERTISEMENT

ಹುಲಿಗೆಮ್ಮನಕೊಳ್ಳ: ಧುಮ್ಮಿಕ್ಕುವ ಜಲಧಾರೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 4:43 IST
Last Updated 13 ಅಕ್ಟೋಬರ್ 2017, 4:43 IST

ಹುಲಿಗೆಮ್ಮನಕೊಳ್ಳ (ಬಾದಾಮಿ): ತಾಲ್ಲೂಕಿನ ಭದ್ರನಾಯಕ ಜಾಲಿಹಾಳ ಗ್ರಾಮದಿಂದ ಎರಡು ಕಿ.ಮೀ. ಸಮೀಪದ ನಿಸರ್ಗ ಸೌಂದರ್ಯದ ಬೆಟ್ಟದ ಮೇಲಿಂದ ಹಾಲಿನ ನೊರೆಯಂತೆ ಹುಲಿಗೆಮ್ಮನಕೊಳ್ಳದಲ್ಲಿ ಜಲಧಾರೆ ಧುಮ್ಮಿಕ್ಕುತ್ತಿದೆ.

ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಜಲಧಾರೆ ಸುರಿಯುತ್ತಿದೆ. ಜಲಪಾತದ ನೀರು ಮಲಪ್ರಭಾ ನದಿಗೆ ಹರಿದು ಹೋಗುತ್ತಿದ್ದು, ಕೆಲವರು ಜಲಧಾರೆಯ ಕೆಳಗೆ ಕುಳಿತು ಸ್ನಾನ ಮಾಡಿದರು.

ಸುತ್ತಲಿನ ಗ್ರಾಮಗಳ ನಿಸರ್ಗ ಪ್ರಿಯರು ಜಲಧಾರೆ ವೀಕ್ಷಿಸಲು ಆಗಮಿಸುತ್ತಿದ್ದರು. ಅಂದಾಜು ಎರಡು ತಿಂಗಳ ವರೆಗೆ ಮೇಲಿಂದ ನೀರು ಧುಮ್ಮುಕ್ಕುತ್ತಿದೆ ಎಂದು ಹುಲಿಗೆಮ್ಮಕೊಳ್ಳದ ಅರ್ಚಕರು ಹೇಳಿದರು.

ADVERTISEMENT

ಬುಧವಾರ ಬಾದಾಮಿ–23 ಮಿ.ಮೀ, ಕೆರೂರ–16 ಮಿ.ಮೀ, ಕುಳಗೇರಿ–28 ಮಿ.ಮೀ, ಕಟಗೇರಿ–35 ಮಿ.ಮೀ, ಬೇಲೂರ–38 ಮಿ.ಮೀ, ಗುಳೇದಗುಡ್ಡ–17 ಮಿ.ಮೀ. ಕಂದಾಯ ಇಲಾಖೆಯಲ್ಲಿ ಮಳೆಯಾದ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.