ADVERTISEMENT

ಸಾಧಕರಿಗೆ ಸನ್ಮಾನಿಸುವುದು ಅನನ್ಯ: ಬೆಳಗಲಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 15:38 IST
Last Updated 11 ಸೆಪ್ಟೆಂಬರ್ 2024, 15:38 IST
<div class="paragraphs"><p>ಮಹಾಲಿಂಗಪುರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು</p></div>

ಮಹಾಲಿಂಗಪುರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು

   

ಮಹಾಲಿಂಗಪುರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪತ್ತೆ ಹಚ್ಚಿ ಸನ್ಮಾನ ಮಾಡುವ ಕಾರ್ಯಕ್ರಮ ನಿಜವಾಗಿಯೂ ಅನನ್ಯವಾದುದು ಮತ್ತು ಅರ್ಥ ಪೂರ್ಣವಾದುದು. ಈ ಸಾಧಕರನ್ನು ನಾನು ಸಮಾಜಕ್ಕೆ ಪರಿಚಯಿಸಿ ಸಾಧಕರಿಗೆ ನಾವು ಪ್ರೇರಣೆ ಕೊಡುತ್ತಿದ್ದೇವೆ ಎಂದು ಕಮಿಟಿ ಅಧ್ಯಕ್ಷ ಡಾ.ಎ.ಆರ್.ಬೆಳಗಲಿ ಹೇಳಿದರು.

ಪಟ್ಟಣದ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಗಡಾದಗಲ್ಲಿಯ ರಾಣಿ ಚನ್ನಮ್ಮ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಆಯೋಜಿಸಲಾಯಿತು.

ADVERTISEMENT

ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ರನ್ನಬೆಳಗಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೂಪಾ ಹೊಸಟ್ಟಿ, ಉಪಾಧ್ಯಕ್ಷೆ ಸಹನಾ ಸಾಂಗಲಿಕರ, ನಿವೃತ್ತ ಶಿಕ್ಷಕ ಎಂ.ಬಿ.ಹಿಡಕಲ್ಲ, ಗುತ್ತಿಗೆದಾರ ಮಲ್ಲೇಶಪ್ಪ ಮುಗಳಖೋಡ, ಎಂಜಿನಿಯರ್ ಶಿವಾನಂದ ಕನ್ನಾಳ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿವಲಿಂಗ ಜುಟನಟ್ಟಿ ಅವರನ್ನು ಸನ್ಮಾನಿಸಲಾಯಿತು.

ಪಂಚಮಸಾಲಿ ನಗರ ಘಟಕದ ಅಧ್ಯಕ್ಷ ಬಸಪ್ಪ ಕೊಪ್ಪದ, ಮಹಿಳಾ ಘಟಕದ ಅಧ್ಯಕ್ಷೆ ಡಾ.ವಿದ್ಯಾ ದಿನ್ನಿಮನಿ, ಈರಪ್ಪ ದಿನ್ನಿಮನಿ, ವಿಜುಗೌಡ ಪಾಟೀಲ, ನಾಗಪ್ಪ ಖೋತ, ಶ್ರೀಶೈಲಪ್ಪ ಉಳ್ಳೇಗಡ್ಡಿ, ಅಶೋಕ ದಿನ್ನಿಮನಿ, ಅಕ್ಕಾತಾಯಿ ಕಿಚಡಿ, ಮುತ್ತಪ್ಪ ದಲಾಲ, ಸಿದ್ದುಗೌಡ ಪಾಟೀಲ, ಹಣಮಂತ ಶಿರೋಳ, ವಿಜಯಕುಮಾರ ಕುಳಲಿ, ಚನ್ನಪ್ಪ ಪಟ್ಟಣಶೆಟ್ಟಿ, ಮಹಾಲಿಂಗಪ್ಪ ಕಂಠಿ, ಸಂತೋಷ ಹುದ್ದಾರ, ಆನಂದ ಖೋತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.