ADVERTISEMENT

ಗುಳೇದಗುಡ್ಡ: ಮತ ಚಲಾಯಿಸಿದ ವೃದ್ಧೆ ಕುಸಿದು ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 7 ಮೇ 2024, 15:30 IST
Last Updated 7 ಮೇ 2024, 15:30 IST
ಅಮರವ್ವ ಜೋಜಾ
ಅಮರವ್ವ ಜೋಜಾ   

ಗುಳೇದಗುಡ್ಡ (ಬಾಗಲಕೋಟೆ ಜಿಲ್ಲೆ): ಮತದಾನ ಮಾಡಿ, ಮನೆಗೆ ಮರಳುವಾಗ ಪಟ್ಟಣದ ನಿವಾಸಿ ಅಮರವ್ವ ಜೋಜಾ ಚಳ್ಳಮರದ (77) ಎಂಬುವರು ದಾರಿ ಮಧ್ಯೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

‘ಅಮರವ್ವ ಅವರು ಬಿಸಿಲಿನ ತಾಪಕ್ಕೆ ಕುಸಿದು ಬಿದ್ದಿದ್ದಾರೆ.ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು’ ಎಂದು ಕುಟುಂಬಸ್ಥರು ತಿಳಿಸಿದರು. ಅವರಿಗೆ ಪತಿ, ಇಬ್ಬರು ಸಹೋದರರು ಮತ್ತು ಸಹೋದರಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT