ಬಾದಾಮಿ: ‘ತಾಲ್ಲೂಕಿನ ಉಗಲವಾಟ ಗ್ರಾಮದಲ್ಲಿದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ, ಸೆ.24ರಂದು ಬಾದಾಮಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ’ ಎಂದು ದಲಿತ ಮುಖಂಡ ರುದ್ರೇಶ ಹುಣಸಿಗಿಡದ ಹೇಳಿದರು.
ಗ್ರಾಮದಲ್ಲಿ ದಲಿತರ ಮೇಲೆ ಬಹಿಷ್ಕಾರ ಹಾಕಿದ ವ್ಯಕ್ತಿಗಳ ಮೇಲೆ ದೂರು ನೀಡಿದ್ದರೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಗುರುವಾರ ಪತ್ರಕರ್ತರಿಗೆ ತಿಳಿಸಿದರು.
‘ದಲಿತರ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಿರುವುದರಿಂದ ಅಂಗಡಿಯಲ್ಲಿ ದಿನಸಿ ವಸ್ತು ಕೊಡುವುದಿಲ್ಲ ಕೆಲಸಕ್ಕೆ ಕರೆಯುತ್ತಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಕೆಲವರು ಗ್ರಾಮದಲ್ಲಿ ಇದ್ದಾರೆ. ಇದುವರೆಗೂ ಅವರನ್ನು ಬಂಧಿಸಿಲ್ಲ. ಬದುಕಲು ದಲಿತರಿಗೆ ಭಯದ ವಾತಾವರಣ ಉಂಟಾಗಿದೆ ’ ಎಂದು ಮಂಜುನಾಥ ಮಾದರ ಹೇಳಿದರು.
ಯಲ್ಲಪ್ಪ ಮಾದರ, ಮಲ್ಲಪ್ಪ ಮಾದರ, ಹೊಳಿಯಪ್ಪ ಮಾದರ, ಕನಕಪ್ಪ ಮಾದರ, ರಂಗನಾಥ ಕಾತರಕಿ, ಬಸವರಾಜ ಮಾದರ, ಹೊಳಿಯಪ್ಪ ಭೋವಿ. ಸಿ.ಬಿ. ತೆಳಗಿಮನಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.