
ಬಾದಾಮಿ: ಚಾಲುಕ್ಯ ಉತ್ಸವ -2026ರ ಅಂಗವಾಗಿ ನಡೆದ ‘ಚಾಲುಕ್ಯ ನಡಿಗೆ ಸ್ಮಾರಕಗಳ ಕಡೆಗೆ’ ಯಶಸ್ವಿಯಾಗಿ ಸಂಭ್ರಮದಿಂದ ನಡೆಯಿತು.
ಜಿಲ್ಲಾ ಆಡಳಿತ , ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಭಾನುವಾರ ಬೆಳಿಗ್ಗೆ ಸರ್ಕಾರಿ ಪ್ರೌಢ ಶಾಲೆಯಿಂದ ಗುಹಾಂತರ ದೇವಾಲಯಗಳವರೆಗೆ ನಡೆಯಿತು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ‘ಚಾಲುಕ್ಯ ನಡಿಗೆ ಸ್ಮಾರಕಗಳ ಕಡೆಗೆ ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
‘ಮೇಣಬಸದಿಯಲ್ಲಿ ನಡೆದ ಸಮಾರಂಭದಲ್ಲಿ ಚಾಲುಕ್ಯರ ಸ್ಮಾರಕಗಳನ್ನು ಮುಂದಿನ ಪೀಳೆಗೆಗೆ ಸಂರಕ್ಷಿಸಬೇಕಿದೆ. ಗತವೈಭವದ ಸಾಮ್ರಾಜ್ಯದ ಇತಿಹಾಸದ ಬಗ್ಗೆ ನಮಗೆಲ್ಲ ಅಭಿಮಾನ ಇರಬೇಕು’ ಎಂದರು.
ಸ್ಥಳೀಯ ಗಣ್ಯರು, ಸರ್ಕಾರಿ ಇಲಾಖೆಗಳ ನೌಕರರು, ಶಾಲಾ ಕಾಲೇಜುಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಂದಾಜು ಮೂರು ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.
ಯುವಕರಿಗೆ ಸ್ಪರ್ಧೆ: ‘ಗ್ರಾಮೀಣ ಕ್ರೀಡೆಗಳು ಇಂದು ಮಾಯವಾಗುತ್ತಿವೆ. ಯುವಕರು ದೈಹಿಕವಾಗಿ ಸದೃಢರಾಗಲು ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಬೇಕು’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಚಾಲನೆ ನೀಡಿದರು.
ಇಮ್ಮಡಿ ಪುಲಿಕೇಶಿ ವೇದಿಕೆಯ ಆವರಣದಲ್ಲಿ ಪುರುಷರಿಗೆ ಸಂಗ್ರಾಣಿ ಕಲ್ಲು, ಗುಂಡು ಕಲ್ಲು ಮತ್ತು ಭಾರದ ಚೀಲವನ್ನು ಎತ್ತುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಮತ್ತು ಜಿಲ್ಲೆಯ, ತಾಲ್ಲೂಕಿನ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.