ADVERTISEMENT

ಪುಲಿಕೇಶಿ ಮೂರ್ತಿ ಶೀಘ್ರ ಪ್ರತಿಷ್ಠಾಪನೆ: ಶಾಸಕ ಭೀಮಸೇನ ಚಿಮ್ಮನಕಟ್ಟಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 6:57 IST
Last Updated 19 ಫೆಬ್ರುವರಿ 2026, 6:57 IST
ಬಾದಾಮಿಯಲ್ಲಿ ಶುಕ್ರವಾರ ನಡೆದ ಅಭಿನಂದನಾ ಸಮಾರಂಭವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಉದ್ಘಾಟಿಸಿದರು
ಬಾದಾಮಿಯಲ್ಲಿ ಶುಕ್ರವಾರ ನಡೆದ ಅಭಿನಂದನಾ ಸಮಾರಂಭವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಉದ್ಘಾಟಿಸಿದರು   

ಬಾದಾಮಿ: ‘ಚಾಲುಕ್ಯ ಉತ್ಸವಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಠಾಪನೆಗೆ ಚಾಲನೆ ನೀಡಿದ್ದು, ಅತೀ ಶೀಘ್ರದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗುವುದು’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಇಲ್ಲಿನ ಶಿವಯೋಗಮಂದಿರ ಸಂಸ್ಥೆಯ ಕುಮಾರೇಶ್ವರ ಭವನದಲ್ಲಿ ಶುಕ್ರವಾರ ನಡೆದ ಚಾಲುಕ್ಯ ಉತ್ಸವ–2026ರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ದಶಕದ ನಂತರ ಚಾಲುಕ್ಯ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸಿನ ನೆರವು ನೀಡಿದ್ದಾರೆ. ಚಾಲುಕ್ಯರ ಸಂಸ್ಕೃತಿ, ಇತಿಹಾಸ, ಪರಂಪರೆಯ ಗತವೈಭವವನ್ನು ಜನಮಾನಸದಲ್ಲಿ ಬಿತ್ತುವಂತೆ ಮಾಡಿದ್ದಾರೆ’ ಎಂದರು.

ADVERTISEMENT

‘ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸೇರಿದಂತೆ ಅನೇಕ ಸಚಿವರು, ಶಾಸಕರು, ಜಿಲ್ಲೆ–ತಾಲ್ಲೂಕಿನ ಅಧಿಕಾರಿಗಳು ಮತ್ತು ಸ್ಥಳೀಯ ಸಮಿತಿ ಸದಸ್ಯರು ಚಾಲುಕ್ಯ ಉತ್ಸವದ ಯಶಸ್ಸಿಗೆ ಸಹಕರಿಸಿದ್ದಾರೆ’ ಎಂದು ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಡಿವೇಂದ್ರ ಇನಾಂದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಎಸ್.ಎಫ್. ಬೊಮ್ಮನ್ನವರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಶಿವು ಹಿರೇಮಠ, ಪಾಂಡಪ್ಪ ಕಟ್ಟಿಮನಿ, ಆರ್.ಸಿ. ಭಂಡಾರಿ, ಸಂಗೀತಾ ಕೋಲಾರ, ಅಶೋಕ ಕೋಟನಕರ ಇದ್ದರು.

ಚಾಲುಕ್ಯ ಉತ್ಸವವು ದಶಕದ ನಂತರ ನಡೆದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಕಾರದಿಂದ ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಜರುಗಿದೆ
ಸಂತೋಷ ಜಗಲಾಸರ ಬಾಗಲಕೋಟೆ ಉಪವಿಭಾಗಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.