ADVERTISEMENT

ಇಳಕಲ್: ಆನ್ ಲೈನ್ ಬೆಟ್ಟಿಂಗ್ ಆ್ಯಪ್ ನಿಷೇಧಕ್ಕೆ ಆಗ್ರಹಿಸಿ ಸೀರೆ ನೇಯ್ದ ನೇಕಾರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 4:11 IST
Last Updated 23 ಫೆಬ್ರುವರಿ 2025, 4:11 IST
ಇಳಕಲ್ ಸೀರೆಯಲ್ಲಿ ಆನ್ ಲೈನ್ ಬೆಟ್ಟಿಂಗ್ ಆ್ಯಪ್ ನಿಷೇಧಿಸುವಂತೆ ಒತ್ತಾಯಿಸಿ ಸೀರೆ ನೇಯ್ದ ಯುವ ನೇಕಾರ ಮೇಘರಾಜ್ ಗುದ್ದಟ್ಟಿ
ಇಳಕಲ್ ಸೀರೆಯಲ್ಲಿ ಆನ್ ಲೈನ್ ಬೆಟ್ಟಿಂಗ್ ಆ್ಯಪ್ ನಿಷೇಧಿಸುವಂತೆ ಒತ್ತಾಯಿಸಿ ಸೀರೆ ನೇಯ್ದ ಯುವ ನೇಕಾರ ಮೇಘರಾಜ್ ಗುದ್ದಟ್ಟಿ   

ಇಳಕಲ್: ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಗಳನ್ನು ನಿಷೇಧಿಸುವಂತೆ ಇಲ್ಲಿಯ ಯುವ ನೇಕಾರ ಮೇಘರಾಜ್ ಗುದ್ದಟ್ಟಿ ಇಳಕಲ್ ಸೀರೆಯಲ್ಲಿ ನೇಯ್ಗೆ ಮಾಡಿ ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದ್ದಾರೆ.

‘ರಮ್ಮಿ, ಡ್ರಿಮ್ 11ದಂತಹ ಆ್ಯಪ್ ಗಳ ವ್ಯಸನದಿಂದಾಗಿ ದೇಶಾದ್ಯಂತ ಲಕ್ಷಾಂತರ ಯುವಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಗುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಆನ್ ಲೈನ್ ಜೂಜಾಟದ ಈ ಆ್ಯಪ್ ಗಳನ್ನು ನಿಷೇಧಿಸಿ, ಕುಟುಂಬಗಳನ್ನು ರಕ್ಷಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಸರ್ಕಾರದ ಗಮನ ಸೆಳೆಯಲು ಕೈಮಗ್ಗದ ಇಳಕಲ್ ಸೀರೆಯಲ್ಲಿ ನೇಯ್ಗೆ ಮಾಡಿದ್ದೇನೆ’ ಎಂದು ಮೇಘರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT
ಇಳಕಲ್ ಸೀರೆಯಲ್ಲಿ ಆನ್ ಲೈನ್ ಬೆಟ್ಟಿಂಗ್ ಆ್ಯಪ್ ನಿಷೇಧಿಸುವಂತೆ ಒತ್ತಾಯಿಸಿ ಸೀರೆ ನೇಯ್ದ ಯುವ ನೇಕಾರ ಮೇಘರಾಜ್ ಗುದ್ದಟ್ಟಿ
ಇಳಕಲ್ ಸೀರೆಯಲ್ಲಿ ಆನ್ ಲೈನ್ ಬೆಟ್ಟಿಂಗ್ ಆ್ಯಪ್ ನಿಷೇಧಿಸುವಂತೆ ಒತ್ತಾಯಿಸಿ ಸೀರೆ ನೇಯ್ದ ಯುವ ನೇಕಾರ ಮೇಘರಾಜ್ ಗುದ್ದಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.