ADVERTISEMENT

ಬಾಗಲಕೋಟೆ | ಡೆಂಗಿ ಜ್ವರ: ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 17 ಮೇ 2025, 15:56 IST
Last Updated 17 ಮೇ 2025, 15:56 IST
 ಸಂಸ್ಕೃತಿ
 ಸಂಸ್ಕೃತಿ   

ಕುಳಗೇರಿ ಕ್ರಾಸ್: ಸಮೀಪದ ಬೀರನೂರ ಗ್ರಾಮದ ಸಂಸ್ಕೃತಿ ಸುರೇಶ್ ಅಂಬಣ್ಣವರ (13) ಡೆಂಗಿ ಜ್ವರದಿಂದ ಶುಕ್ರವಾರ ಮೃತಪಟ್ಟಿದ್ದಾಳೆ. ಅವಳು ಮಂಗಳೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಳು.

‘ತೀವ್ರ ಜ್ವರದಿಂದ ಬಳಲುತ್ತಿದ್ದ ನನ್ನ ಮಗಳನ್ನು ಶುಕ್ರವಾರ ಬಾದಾಮಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದೆವು. ಅವಳ ಸಾವಿಗೆ ಡೆಂಗಿ ಕಾರಣವೆಂದು ವೈದ್ಯರು ಖಚಿತಪಡಿಸಿದರು’ ಎಂದು ಸಂಸ್ಕೃತಿಯ ತಂದೆ ಸುರೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT