ADVERTISEMENT

ಬಾಗಲಕೋಟೆ: ರೈತರ ಸಂಕಷ್ಟ ಬಿಚ್ಚಿಟ್ಟ ಕಲಾವಿದ, ಕುಳಿತಲ್ಲೇ ನೃತ್ಯ ಮಾಡಿದ ಅಂಗವಿಕಲ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 6:38 IST
Last Updated 28 ಸೆಪ್ಟೆಂಬರ್ 2020, 6:38 IST
ರೈತನ ಸಂಕಷ್ಟದ ಅಣುಕು ಪ್ರದಶ೯ನ ನೀಡಿ ಗಮನ ಸೆಳೆದ ಕಲಾವಿದ ಆರ್.ಡಿ. ಬಾಬು
ರೈತನ ಸಂಕಷ್ಟದ ಅಣುಕು ಪ್ರದಶ೯ನ ನೀಡಿ ಗಮನ ಸೆಳೆದ ಕಲಾವಿದ ಆರ್.ಡಿ. ಬಾಬು   
""

ಬಾಗಲಕೋಟೆ: ನಗರದಲ್ಲಿ ಪ್ರತಿಭಟನೆ ವೇಳೆ ಜ್ಯೂನಿಯರ್ ಉಪೇಂದ್ರ ಎಂದೇ ಖ್ಯಾತರಾದ ಕಲಾವಿದ ಆರ್.ಡಿ. ಬಾಬು ರೈತನ ಸಂಕಷ್ಟದ ಅಣುಕು ಪ್ರದಶ೯ನ ನೀಡಿ ಗಮನ ಸೆಳೆದರು.

ಜಯ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷರೂ ಆದ ಆರ್.ಡಿ‌.ಬಾಬು, ನಗರದ ಬಸವೇಶ್ವರ ವೃತ್ತದ ಬಳಿ ವಿವಿಧ ಸಂಘಟನೆಗಳಿಂದ ನಡೆಯುತ್ತಿರೋ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮುಂದೆ ರೈತ ತನ್ನ ಗೋಳು ಹೇಳಿಕೊಳ್ಳುತ್ತಿರುವ ದೃಶ್ಯವನ್ನು ಮನಮುಟ್ಟುವಂತೆ ಅಭಿನಯಿಸಿದರು. ರೈತನ ರೀತಿ ವೇಷ ಧರಿಸಿ ಭಜ೯ರಿ ಡೈಲಾಗ್ ಹೊಡೆದರು.

ಇದೇ ವೇಳೆ ರೈತಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕನಾ೯ಟಕ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿ ಮಾನವ ಸರಪಳಿ ನಿಮಿ೯ಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಬೊಬ್ಬೆ ಇಟ್ಟು ಸಕಾ೯ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

***

ರೈತಗೀತೆಗೆ ಕುಳಿತಲ್ಲೇ ನೃತ್ಯ ಮಾಡಿದ ಅಂಗವಿಕಲ ಬಾಬು

ಬಾಗಲಕೋಟೆ: ಕನಾ೯ಟಕ ಬಂದ್ ಹಿನ್ನೆಲೆ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಅಂಗವಿಕಲ ಬಾಬು ರೈತ ಗೀತೆಗೆ ನಡುರಸ್ತೆಯಲ್ಲೇ ಕುಳಿತು ನೃತ್ಯ ಮಾಡಿ ಗಮನ ಸೆಳೆದರು.

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿ ನೋಡಲ್ಲಿ ಹಾಡಿನ ವೇಳೆ ಬಾಬು ನೃತ್ಯ ಮಾಡಿದರು.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಏಕಾಏಕಿ ಬಂದ ಬಾಬು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.