ADVERTISEMENT

ಬಾಗಲಕೋಟೆ: ಶೀಲ ಶಂಕಿಸಿ ಪತ್ನಿಯ ತಲೆ ಬೋಳಿಸಿದ ಪತಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 10:25 IST
Last Updated 3 ಫೆಬ್ರುವರಿ 2026, 10:25 IST
<div class="paragraphs"><p>ಉಮೇಶ್</p></div>

ಉಮೇಶ್

   

ಬಾಗಲಕೋಟೆ: ಪತ್ನಿಯ ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವಮಾನ ಮಾಡುವ ಉದ್ದೇಶದಿಂದ ಪತಿಯೇ ಪತ್ನಿಯ ತಲೆ ಬೋಳಿಸಿದ್ದಾರೆ.

ತೊದಲಬಾಗಿಯ ಉಮೇಶ ಎನ್ನುವ ಆರೋಪಿ ಎಲೆಕ್ಟ್ರಿಕ್ ಟ್ರಿಮ್ಮರ್‌ನಿಂದ ತಲೆ ಬೋಳಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ಪತ್ನಿಯ ತವರು ಮನೆಯವರು ಬುದ್ಧಿ ಹೇಳಿದ್ದರು. ಆ ನಂತರವೂ ಪತಿಯ ನಡವಳಿಕೆಯಲ್ಲಿ ಬದಲಾವಣೆಯಾಗಿರಲಿಲ್ಲ.

ಜ.31ರಂದು ರಾತ್ರಿ ತಲೆ ಬೋಳಿಸಿ, ಮನೆಯಲ್ಲಿ ಕೂಡಿ ಹಾಕಲಾಗಿತ್ತು. ಆರೋಪಿ ಉಮೇಶ್ ಅವರನ್ನು ಬಂಧಿಸಲಾಗಿದೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.