
ಬಾಗಲಕೋಟೆ: ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಅರ್ಪಿಸಲು ಪಂಚ ಲೋಹಗಳ 151 ಕೆ.ಜಿ ತೂಕದ ಗಂಟೆಯನ್ನು ಸಿದ್ಧಪಡಿಸಲಾಗಿದ್ದು, ಮಾರ್ಚ್ 14ರಂದು ಅದು ಸಮರ್ಪಣೆ ಆಗಲಿದೆ.
‘ಅಖಿಲ ಕರ್ನಾಟಕ ಮರಗಾಲು ಮಲ್ಲಯ್ಯಗಳ ಸಂಘ ಮತ್ತು ಬೆಂಗಳೂರಿನ ಅಮ್ಮ ಫೌಂಡೇಶನ್ ವತಿಯಿಂದ ತಯಾರಿಸಲಾಗಿದೆ’ ಎಂದು ಸಂಘದ ಮುಖಂಡ ಮುಂಡಅನಗವಾಡಿಯ ಲಕ್ಷಣ ಇಂಗುನವರ ತಿಳಿಸಿದ್ದಾರೆ.
‘ಬಾಗಲಕೋಟೆ, ವಿಜಯಪುರ ಸೇರಿ ಉತ್ತರ ಕರ್ನಾಟಕದ ಹತ್ತಾರು ಜಿಲ್ಲೆಗಳ 150ಕ್ಕೂ ಹೆಚ್ಚು ಮರಗಾಲು ಮಲ್ಲಯ್ಯರ ಸ್ವಯಂ ಪ್ರೇರಣೆಯಿಂದ ಗಂಟೆ ನಿರ್ಮಿಸಲಾಗಿದೆ. ಅಮ್ಮ ಫೌಂಡೇಶನ್‌ನ ಸಂಸ್ಥಾಪಕ ರೋಹಿತ್ ಕೆಂಪೇಗೌಡ್ ತಂಡಕ್ಕೆ ಬೆಂಬಲ ನೀಡಿದರು’ ಎಂದು ಸಂಘದ ಮುಖಂಡ ಕೃಷ್ಣ ಗೌಡರ್ ತಿಳಿಸಿದ್ದಾರೆ
ಮಾ.1ರಂದು ಚಿಕ್ಕೋಡಿ ತಾಲ್ಲೂಕಿನ ಯಡೂರಿನಲ್ಲಿ ಗಂಟೆ ಉತ್ಸವ ಯಾತ್ರೆಗೆ ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಚಾಲನೆ ನೀಡುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.