ADVERTISEMENT

ಬಾಗಲಕೋಟೆ | ಶಿವಾಜಿ ಜಯಂತಿ ಮೆರವಣಿಗೆ: ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 18:22 IST
Last Updated 19 ಫೆಬ್ರುವರಿ 2026, 18:22 IST
   

ಬಾಗಲಕೋಟೆ:‌ ಶಿವಾಜಿ ಜಯಂತಿ ಹಿನ್ನಲೆಯಲ್ಲಿ ಶಿವಾಜಿ ಜಯಂತಿ ಸಮಿತಿಯಿಂದ‌ ಗುರುವಾರ ನಡೆದಿದ್ದ ಬೃಹತ್‌ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಲಾಗಿದೆ

ಮೆರವಣಿಗೆ ಪಂಕಾ ಮಸೀದಿ ಮಾರ್ಗವಾಗಿ ಹೋಗುವಾಗ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ‌ ಮಾಡಿದ್ದಾರೆ.

ಈ ವೇಳೆ‌ ಎಸ್ಪಿ ಸಿದ್ದಾರ್ಥ ಗೋಯಲ್ ಅವರ ತಲೆಗೆ‌ ಗಾಯವಾಗಿದೆ‌ ಎನ್ನಲಾಗಿದೆ.

ADVERTISEMENT

ಗೋಯಲ್ ಅವರ‌‌ ಶರ್ಟ್ ಮೇಲೆ‌‌ ರಕ್ತದ ಕಲೆಯಾಗಿದೆ. ತಲೆ ಪೂರ್ತಿ ಕವರ್ ಆಗಿರುವಂತಹ ಹೆಲ್ಮೆಟ್ ಧರಿಸಿದ ಅವರು, ಕೂಡಲೇ ಅಲ್ಲದ ವಾಹನದಲ್ಲಿ ತೆರಳಿದ್ದಾರೆ.

ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಮೆರವಣಿಗೆ ನಡೆದಿದ್ದರೂ ಕಲ್ಲು ತೂರಾಟ ನಡೆದಿದೆ.

ಶಿವಾಜಿ ಸಮಿತಿ ಮೆರವಣಿಗೆಯಲ್ಲಿ ಸಾವಿರಾರು ಯುವಕರು ಸೇರಿದ್ದರು. ಯುವಕರು ವಾಗ್ವಾದಕ್ಕೆ ಇಳಿದಿದ್ದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ಯುವಕರನ್ನು ಚದುರಿಸಿ,‌ ಪರಿಸ್ಥಿತಿಯನ್ನು ನಿಯಂತ್ರಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ

ಕಲ್ಲು ತೂರಾಟದಲ್ಲಿ ತಮಗೆ ಯಾವುದೇ ತೊಂದರೆ ಆಗಿಲ್ಲ. ಸಣ್ಣದಾಗಿ ತರಚಿದೆ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ಸ್ಥಳದಲ್ಲಿ ಸಹಜ ಪರಿಸ್ಥಿತಿ ಇದೆ
ಎಸ್ಪಿ ಸಿದ್ಧಾರ್ಥ ಗೋಯಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.